ಪಾವತಿ ಆಧಾರದ ಮೇಲೆ ವೃದ್ಧಾಶ್ರಮ ಪ್ರಾರಂಭ
ಉಡುಪಿ, ಜ.18: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಸಶಸ್ತ್ರ ಪಡೆಗಳಿಂದ ನಿವೃತ್ತಿಯಾದ ಸೈನಿಕರಿಗೆ, ಸೇನೆಯು ಅರೆ ಸರ್ಕಾರಿ ಸಂಸ್ಥೆ ಯೊಂದಿಗೆ ವೃದ್ಧಾಶ್ರಮವನ್ನು ಪಾವತಿ ಆಧಾರದ ಮೇಲೆ ಪ್ರಾರಂಭಿಸಲು ಯೋಜಿಸಿದ್ದು, ಇದರ ಉಪಯೋಗವನ್ನು ಪಡೆಯಲಿಚ್ಛಿಸುವ ಮಾಜಿ ಸೈನಿಕರು ತಮ್ಮ ಹೆಸರುಗಳನ್ನು ಜ.22ರೊಳಗೆ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಇವರಿಗೆ ಸಲ್ಲಿಸುವಂತೆ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.
Next Story