ಸಂಪಾಜೆ: ಮನೆ ಮೇಲಿಂದ ಬಿದ್ದು ಯುವಕ ಮೃತ್ಯು
ಸಂಪಾಜೆ: ಮನೆಯ ಸಿಮೆಂಟ್ ಶೀಟ್ನ್ನು ದುರಸ್ಥಿಗೊಳಿಸುತ್ತಿರುವಾಗ ಆಯ ತಪ್ಪಿ ಬಿದ್ದು ಕೂಲಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಸಂಪಾಜೆಯ ಕೊಯಿನಾಡಿನಲ್ಲಿ ಮಂಗಳವಾರ ವರದಿಯಾಗಿದೆ.
ಮಡಿಕೇರಿಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಸುಗುಣ ಮೃತರು ಎಂದು ಗುರತಿಸಲಾಗಿದೆ.
ಕೊಯಿನಾಡಿನ ರಬ್ಬರ್ ಎಸ್ಟೇಟ್ನಲ್ಲಿ ಮನೆಯ ಶೀಟನ್ನು ದುರಸ್ತಿಗೊಳಿಸುತ್ತಿರುವಾಗ ಆಯತಪ್ಪಿ ಶೀಟು ಸಮೇತ ನೆಲಕ್ಕೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ಸುಳ್ಯದ ಆಸ್ಪತ್ರೆಗೆ ತಂದು ಪರಿಶೀಲಿಸಿದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story