ಮೇ 14: ನಮ್ಮ ನಾಡು ಒಕ್ಕೂಟ, ಟಿಆರ್ಎಫ್ ವತಿಯಿಂದ ಉಚಿತ ಉದ್ಯೋಗ ಮೇಳ
ಮಂಗಳೂರು ಮತ್ತು ಉಡುಪಿ ಜಿಲ್ಲೆಯ ನಿರುದ್ಯೋಗಿ ಯುವಕ / ಯುವತಿಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ನಮ್ಮ ನಾಡು ಒಕ್ಕೂಟ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮೆರಿಟ್ಯೂಡ್ ಸ್ಕಿಲ್ ಡೆವಲಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಇದರ ಸಹಯೋಗದೊಂದಿಗೆ ರಿಲಯನ್ಸ್ ಟ್ರೆಂಡ್ಸ್ ಹಾಗೂ ಜಸ್ಟ್ ಡಯಲ್ ಕಂಪೆನಿಯಲ್ಲಿ ಕ್ಯಾಷಿಯರ್, ಸೇಲ್ಸ್ ಎಕ್ಸಿಕ್ಯೂಟಿವ್, ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಇನ್ನಿತರ ಹುದ್ದೆಗಳಿಗಾಗಿ ಮೇ 14ರಂದು ಟಿಆರ್ಎಫ್ ಕಚೇರಿ, ವಿಶ್ವಾಸ್ ಕ್ರೌನ್, ಕೊಚ್ಚಿನ್ ಬೇಕರಿ ಹತ್ತಿರ, ಕಂಕನಾಡಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.
18 ರಿಂದ 30 ವರ್ಷದೊಳಗಿನ ಯುವಕ ಯುವತಿಯರು ಪಿಯುಸಿ, ಐಟಿಐ ಡಿಪ್ಲೊಮ ಹಾಗೂ ಪದವಿ ಪಾಸಾದ ಪದವಿಧರರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಅರ್ಜಿಯನ್ನು ಇಲ್ಲಿ ಸಲ್ಲಿಸ ಬಹುದು:
ಹೆಚ್ಚಿನ ಮಾಹಿತಿಗಾಗಿ- 8884461616/ 6361988950/ 8660996093 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story