ರಾಜ್ಯಸಭೆಗೆ ಜೆಡಿಯು ಟಿಕೆಟ್ ಪಡೆದ ಕುಂದಾಪುರ ಮೂಲದ ಅನಿಲ್ ಹೆಗ್ಡೆ | Vartha Bharati- ವಾರ್ತಾ ಭಾರತಿ

--

ರಾಜ್ಯಸಭೆಗೆ ಜೆಡಿಯು ಟಿಕೆಟ್ ಪಡೆದ ಕುಂದಾಪುರ ಮೂಲದ ಅನಿಲ್ ಹೆಗ್ಡೆ

ಉಡುಪಿ: ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನೂ ಅಚ್ಚರಿಗೊಳಿಸಿದ ನಡೆಯೊಂದರಲ್ಲಿ ಬಿಹಾರದಿಂದ ನಡೆಯುವ ರಾಜ್ಯಸಭಾ ಉಪಚುನಾವಣೆಗೆ ಕನ್ನಡಿಗ ಅನಿಲ್ ಹೆಗ್ಡೆ ಅವರನ್ನು ಜೆಡಿಯು ತನ್ನ ಅಭ್ಯರ್ಥಿ ಯಾಗಿ ಘೋಷಿಸಿದೆ.

ಈ ಮೂಲಕ ದಶಕಗಳಿಂದ ಸದ್ದಿಲ್ಲದೇ ಪಕ್ಷದ ವಿವಿಧ ಹುದ್ದೆಗಳಲ್ಲಿ ದುಡಿಯುತಿದ್ದ ನಿಷ್ಠಾವಂತ ರಾಜಕೀಯ ಕಾರ್ಯಕರ್ತನೊಬ್ಬ ರಾಜಕೀಯದಲ್ಲಿ ಮುಂಚೂಣಿಗೆ ಬರುವಂತಾಗಿದೆ.

ಮೇ 30ರಂದು ನಡೆಯುವ ಉಪಚುನಾವಣೆಯಲ್ಲಿ ಅನಿಲ್ ಹೆಗ್ಡೆ ಅವರ ಆಯ್ಕೆ ಖಚಿತವಾಗಿದೆ.

ಅನಿಲ್ ಹೆಗ್ಡೆ ಮೂಲತ: ಕುಂದಾಪುರ ತಾಲೂಕಿನ ಸಳ್ವಾಡಿಯವರು. ಕುಂದಾಪುರದಲ್ಲಿ ವಕೀಲರಾಗಿದ್ದ ಹಾಲಾಡಿಯ ನಾರಾಯಣ ಹೆಗ್ಡೆ ಹಾಗೂ ಕಾಪುವಿನ ಹೇಮಲತಾ ಹೆಗ್ಡೆ ದಂಪತಿಗಳ ಪುತ್ರ. ಉಡುಪಿ ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಅನಿಲ್ ಹೆಗ್ಡೆ ಆರಂಭದಿಂದಲೂ ಜನತಾ ಪರಿವಾರದಲ್ಲೇ ತಮ್ಮನ್ನು ಗುರುತಿಸಿಕೊಂಡವರು.

ಮೊದಲು ಜನತಾ ಪಾರ್ಟಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದು, ಮತ್ತೊಬ್ಬ ಕನ್ನಡಿಗ, ಹಿರಿಯ ರಾಜಕಾರಣಿ, ಪ್ರಮುಖ ಸಚಿವರೂ ಆಗಿದ್ದ ಜಾರ್ಜ್ ಫೆರ್ನಾಂಡೀಸ್‌ ರೊಂದಿಗೆ ಅವರ ಎಲ್ಲಾ ಹೋರಾಟಗಳಲ್ಲೂ ಪಾಲ್ಗೊಳ್ಳುವ ಮೂಲಕ. ಕೋಕೊಕೋಲಾ ಸೇರಿದಂತೆ ವಿದೇಶಿ ಕಂಪೆನಿಗಳ ವಿರುದ್ಧ ಜಾರ್ಜ್ ಫೆರ್ನಾಂಡೀಸ್ ‘ಯುದ್ಧೋಪಾದಿಯಲ್ಲಿ’ ಹೋರಾಟವನ್ನು ಸಾರಿದಾಗ ಅದರ ಮುಂಚೂಣಿಯಲ್ಲಿದ್ದವರು ಅನಿಲ್ ಹೆಗ್ಡೆ. ಇದೇ ಸಂದರ್ಭದಲ್ಲಿ ಅವರು ಬಿಹಾರದ ನಿತೀಶ್ ಕುಮಾರ್ ಅವರ ಸಂಪರ್ಕಕ್ಕೂ ಬಂದರು.

ಜನತಾ ಪಾರ್ಟಿ ಎರಡು ಹೋಳಾದಾಗ ಜಾರ್ಜ್ ಫೆರ್ನಾಂಡೀಸ್ ಹಾಗೂ ನಿತೀಶ್ ಕುಮಾರ್ ಅವರೊಂದಿಗೆ ಜನತಾದಳ (ಸಂಯುಕ್ತ)ದಲ್ಲಿ ಉಳಿದು ಕೊಂಡರು. ಸುದೀರ್ಘ ಕಾಲ ಜಾರ್ಜ್ ಫೆರ್ನಾಂಡೀಸ್ ಅವರ ಕಾರ್ಯದರ್ಶಿಯಾಗಿದ್ದ ಅನಿಲ್ ಹೆಗ್ಡೆ, ಬಳಿಕ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರಿಗೆ ನಿಕಟವರ್ತಿ ಎನಿಸಿಕೊಂಡು ದಶಕಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಈಗ ಪಕ್ಷದ ರಾಷ್ಟ್ರೀಯ ಚುನಾವಣಾ ಅಧಿಕಾರಿಯಾಗಿದ್ದಾರೆ. ದಶಕಗಳಿಂದ ಅವರು ಬಿಹಾರದಲ್ಲೇ ನೆಲೆಸಿದ್ದಾರೆ.

ಪಕ್ಷ ಹಾಗೂ ಸಂಘಟನೆಗಾಗಿ ಮೌನವಾಗಿ ಕಾರ್ಯನಿರ್ವಹಿಸಿದ ವ್ಯಕ್ತಿಯನ್ನು ಗುರುತಿಸಿ ಇದೀಗ ನಿತೀಶ್ ಕುಮಾರ್ ಅವರು ಏಳು ಬಾರಿ ರಾಜ್ಯಸಭಾ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ಮಹೇಂದ್ರ ಪ್ರಸಾದ್ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಅನಿಲ್ ಹೆಗ್ಡೆ ಅವರನ್ನು ಆಯ್ಕೆ ಮಾಡುವ ಮೂಲಕ ಅವರ ಸೇವೆಯನ್ನು ಗುರುತಿಸಿದ್ದಾರೆ. ಸದ್ಯ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಎರಡು ವರ್ಷಗಳದ್ದಾಗಿರಲಿದೆ.

ಹಿರಿಯ ಸಮಾಜವಾದಿ ನಾಯಕರಾಗಿರುವ 60ರ ಆಸುಪಾಸಿನ ಅನಿಲ್ ಹೆಗ್ಡೆ ಅವರ ತಾಯಿ ಹೇಮಲತಾ ಹೆಗ್ಡೆ ಈಗಲೂ ಸಳ್ವಾಡಿಯ ತಮ್ಮ ತೋಟದ ಮನೆಯಲ್ಲಿದ್ದಾರೆ. ಅವರ ತಂದೆ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದು, ಇಬ್ಬರು ಸಹೋದರರು ಮಂಗಳೂರು ಮತ್ತು ಬೆಂಗಳೂರಿನಲ್ಲಿದ್ದಾರೆ. ಅವಿವಾಹಿತರಾಗಿ ಉಳಿದಿರುವ ಅನಿಲ್ ಹೆಗ್ಡೆ ಪಕ್ಷಕ್ಕಾಗಿ ಹಾಗೂ ಪಕ್ಷದ ಸಂಘಟನೆಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಂತಿದ್ದಾರೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top