ಜಿ.ಟಿ.ಟಿ.ಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಉಡುಪಿ : ಉಡುಪಿ ತಾಲೂಕು ಕೊಳಲಗಿರಿಯ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ.) ದಲ್ಲಿ ಟೊಯೋಟಾ ಕಾರು ಉತ್ಪಾದನಾ ಸಂಸ್ಥೆಯ ಪ್ರಾಯೋಜಿತ ಟೆಕ್ನೀಯನ್ ಕೋರ್ಸ್ಗಳಾದ ವೆಹಿಕಲ್ ಅಸ್ಸೆಂಬ್ಲಿ ಫಿಟ್ಟರ್ ಮತ್ತು ಆಟೋಮೊಬೈಲ್ ವೆಲ್ಡರ್ ಕೋರ್ಸ್ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎಸೆಸೆಲ್ಸಿ ಉತ್ತೀರ್ಣರಾದ, ಕನಿಷ್ಠ ೧೭ ವರ್ಷ ವಯೋಮಿತಿಯ ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವಷರ್ ಜಿ.ಟಿ.ಟಿ.ಸಿ.ಯಲ್ಲಿ ತರಬೇತಿ ಹಾಗೂ ಬೆಂಗಳೂರಿನ ಟೊಯೊಟಾ ಕಿರ್ಲೋಸ್ಕರ್ ಕಾರು ಉತ್ಪಾದನಾ ಕಂಪೆನಿಯಲ್ಲಿ ೨ ವಷರ್ಗಳ ಕೈಗಾರಿಕಾ ತರಬೇತಿ ನೀಡಲಾಗುವುದು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಕೊಳಲಗಿರಿ, ಉಪ್ಪೂರು, ಉಡುಪಿ ದೂರವಾಣಿ ಸಂಖ್ಯೆ: ೦೮೨೦-೨೯೫೦೧೦೧, ಮೊ.ನಂ. ೯೮೮೦೫೧೦೫೮೫ ಅನ್ನು ಸಂಪರ್ಕಿಸ ಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story