ಕಾಸರಗೋಡು | ಡ್ರಗ್ಸ್ ಸಾಗಾಟ ಪತ್ತೆ: ಇಬ್ಬರ ಬಂಧನ
ಕಾಸರಗೋಡು, ಸೆ.18: ಮಾದಕ ವಸ್ತು ವಿರುದ್ಧ ಕಾಸರಗೋಡು ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಎಂಡಿಎಂಎ (MDMA) ಸಹಿತ ಇಬ್ಬರನ್ನು ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಹೊಸದುರ್ಗ ಹದ್ದಾದ್ ನಗರದ ನಿವಾಸಿ ಮಿಯಾದ್(28) ಹಾಗೂ ಹೊಸದುರ್ಗ ಪೂಂಜಾವಿ ನಿವಾಸಿ
ಮುಹಮ್ಮದ್ ಝುಬೈರ್ ಎಲ್.ಕೆ.(31) ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಸಾಗಾಟ ಪತ್ತೆಯಾಗಿದೆ. ಬಂಧಿತರಿಂದ ಮೂರೂವರೆ ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story