ಸೆ. 25 ಐಟಾ ದಿಂದ ಶಿಕ್ಷಕರಿಗಾಗಿ ಉಚಿತ ವೈದ್ಯಕೀಯ ಸಮಾಲೋನೆ, ಆರೋಗ್ಯ ತಪಾಸಣೆ
ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಭಟ್ಕಳ ವತಿಯಿಂದ ಸೆ.25 ರಂದು ನಗರದ ವೆಲ್ಫೇರ್ ಆಸ್ಪತ್ರೆಯ ಸಹಯೋಗದೊಂದಿಗೆ ತಾಲೂಕಿನ ಶಿಕ್ಷಕರಿಗಾಗಿ ಉಚಿತ ವೈದ್ಯಕೀಯ ಸಮಾಲೋಚನೆ ಮತ್ತು ಬಿಪಿ, ಶುಗರ್ ತಪಾಸಣೆ ನಡೆಸಲಾಗುವುದು ಎಂದು ಉ.ಕ. ಐಟಾ ಜಿಲ್ಲಾಧ್ಯಕ್ಷ ಅಲಿ ಮನೆಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಟ್ಕಳದಲ್ಲಿ ಸೆ.25ರಂದು ಬೆಳಗ್ಗೆ 9.30 ರಿಂದ ಮದ್ಯಾಹ್ನ 1 ಗಂಟೆ ವರೆಗೆ ವೆಲ್ಫೇರ್ ಆಸ್ಪತ್ರೆಯಲ್ಲಿ ತಾಲೂಕಿನ ಶಿಕ್ಷಕರಿಗಾಗಿ ಬಿಪಿ, ಶುಗರ್, ಇಸಿಜಿ (ವೈದ್ಯರ ಸಲಹೆ ಮೆರೆಗೆ) ಉಚಿತವಾಗಿ ನಡೆಸಲಾಗುತ್ತಿದ್ದು ಶಿಕ್ಷಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಆಸಕ್ತ ಶಿಕ್ಷಕರು ಸೆ.24 ರ ಸಂಜೆ 5 ಗಂಟೆಯೊಳಗೆ ತಮ್ಮ ಹೆಸರನ್ನು ವೆಲ್ಫೇರ್ ಆಸ್ಪತ್ರೆ ಕೌಂಟರ್ 90193 30977, ಆಥವಾ ಎಂ.ಆರ್.ಮಾನ್ವಿ 9886455416 ರಲ್ಲಿ ನೋಂದಾಯಿಸಿಕೊಳ್ಳುವಂತೆ ಕೋರಿದ್ದಾರೆ.
Next Story