ಇಂದು (ಸೆ.26) ಆಕಾಶದಲ್ಲಿ ಜೂಪಿಟರ್ಸ್ ಒಪೋಸಿಷನ್
ಭೂಮಿಯ ಸಮೀಪ ಬರಲಿದೆ ಗುರು ಗ್ರಹ
ಉಡುಪಿ: ನಮ್ಮ ಸುತ್ತಮುತ್ತ ಇರುವ ಆಕಾಶಕಾಯಗಳಲ್ಲಿ ಗುರು ಗ್ರಹ ಬಹಳ ಅಂದವಾಗಿ ಕಾಣುವ ಗೃಹಗಳಲ್ಲೊಂದು. ಇಂದು ಸೆಪ್ಟಂಬರ್ 26ರಂದು ಗುರು ಗ್ರಹ ವಾರ್ಷಿಕವಾಗಿ ಭೂಮಿಯ ಸಮೀಪ ಬರಲಿದೆ. ಇದನ್ನು ಜೂಪಿಟರ್ ಒಪೊಸಿಷನ್ (jupiter opposition) ಎನ್ನುವರು .
ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದು ಹೋದರೂ ಈ ವರ್ಷ 70 ವರ್ಷಗಳಲ್ಲೇ ಅತ್ಯಂತ ಸಮೀಪದಲ್ಲಿ ಕಂಡುಬರಲಿದೆ. ಸೂರ್ಯನ ಸುತ್ತ ದೀರ್ಘವೃತ್ತದಲ್ಲಿ ಸುತ್ತುವ ನಮ್ಮ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ. ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿ ಪೂರ್ತಿ ಕಾಣಿಸುತ್ತದೆ .
ಈವರ್ಷ ಈಗ 59.1 ಕೋಟಿ ಕಿಮೀ ದೂರದಲ್ಲಿ ಬರಲಿದೆ. ಇನ್ನಾರು ತಿಂಗಳಿಗೆ ಭೂಮಿಗೆ ದೂರದ ದೂರ 94 ಕೋಟಿ ಬರಲಿದೆ. ಹಾಗಾಗಿ ಬರೆ ಕಣ್ಣಿಗೆ ಸಂಜೆ ಪೂರ್ವ ಆಕಾಶದಲ್ಲಿ ಹೊಳೆಯುತ್ತದೆ. ದೂರದರ್ಶಕದಲ್ಲಂತೂ ಈ ಗ್ರಹವನ್ನು ಈಗ ನೋಡವುದು ಒಂದು ಸುಂದರ ಅನುಭವ ಎನ್ನುತ್ತಾರೆ ಖಗೋಳ ವಿಜ್ಞಾನಿ ಉಡುಪಿ ಪಿಪಿಸಿಯ ನಿವೃತ್ತ ಪ್ರಾಂಶುಪಾಲ ಡಾ ಎ ಪಿ ಭಟ್.
Next Story