ಕೆಸಿಸಿಐ ಅಧ್ಯಕ್ಷರಾಗಿ ಗಣೇಶ್ ಕಾಮತ್ ಆಯ್ಕೆ
ಗಣೇಶ್ ಕಾಮತ್
ಮಂಗಳೂರು, ಸೆ.28: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಎಂ.ಗಣೇಶ್ ಕಾಮತ್ ಆಯ್ಕೆಯಾಗಿದ್ದಾರೆ.
ಗಣೇಶ್ ಕಾಮತ್ ಮೆಸರ್ಸ್ ಜಿ.ಕೆ.ಫಾರ್ಮಾದ ಆಡಳಿತ ಪಾಲುದಾರರಾಗಿದ್ದು, 40 ವರ್ಷಗಳಿಂದ ಫಾರ್ಮಾಸ್ಯುಟಿಕಲ್ ಡಿಸ್ಟ್ರಿಬ್ಯೂಷನ್ ಉದ್ಯಮ ನಡೆಸುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅನಂತೇಶ್ ವಿ.ಪ್ರಭು, ಗೌರವ ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಮುಸ್ಬಾ, ಗೌರವ ಕಾರ್ಯದರ್ಶಿಗಳಾಗಿ ಬಿ.ಎ. ನಝೀರ್ ಮತ್ತು ದಿವಾಕರ್ ಪೈ ಕೊಚ್ಚಿಕಾರ್, ನಿರ್ದೇಶಕರಾಗಿ ನಿಸಾರ್ ಫಕೀರ್ ಮುಹಮ್ಮದ್, ನಿಟ್ಟೆ ಯತಿರಾಜ್ ಶೆಟ್ಟಿ, ಅಮಿತ್ ರಾಮಚಂದ್ರ, ಆದಿತ್ಯ ಪದ್ಮನಾಭ ಪೈ, ಪಿ.ಬಿ. ಅಹ್ಮದ್ ಮುದಸ್ಸರ್, ಆತ್ಮಿಕಾ ಅಮೀನ್, ಆನಂದ್ ಜಿ.ಪೈ, ಜೀತನ್ ಅಲೆನ್ ಸಿಕ್ವೇರ, ನಂದಗೋಪಾಲ್ ಶೆಣೈ, ಅಶಿತ್ ಬಿ.ಹೆಗ್ಡೆ, ವಿನ್ಸೆಂಟ್ ಕುಟಿನ್ಹ, ಅಶ್ವಿನ್ ಪೈ ಮಾರೂರ್ ಆಯ್ಕೆಯಾಗಿದ್ದಾರೆ.
Next Story