-

ಶಿರಸಿ: ಅರಣ್ಯ ವಾಸಿಗಳಿಂದ ಸಭಾಧ್ಯಕ್ಷರ ಮನೆ ಮುಂದೆ ಬೃಹತ್ ಧರಣಿ

-

ಶಿರಸಿ: ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ, ಸಭಾಧ್ಯಕ್ಷರ ಮನೆ ಮುಂದೆ ಬೃಹತ್ ಧರಣಿ, ಸಭಾಧ್ಯಕ್ಷರ ಉತ್ತರಕ್ಕೆ ತೀವ್ರ ಅಸಮಧಾನ ಹಾಗೂ ಸುಪ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ 15 ದಿನ ಗಡವು ನೀಡುವುದೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಶಿರಸಿಯ ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಸಾಮಾಜಿಕ ಹೋರಾಟಗಾರ ಕಾಗೋಡ ತಿಮ್ಮಪ್ಪ ಅವರು ಗಾಂಧಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಭಾಧ್ಯಕ್ಷರ ಮನೆ ಮುಂದೆ ಧರಣಿಯಾಗಿ ಪರಿವರ್ತನೆಗೊಂಡಿತು.

ಪ್ರತಿಭಟನೆಯಲ್ಲಿ ಪ್ರಧಾನ ಸಂಚಾಲಕರಾದ ಜಿ. ಎಮ್ ಶೆಟ್ಟಿ, ರಾಜ್ಯ ಸಂಚಾಲಕರಾದ ತಿ.ನ ಶ್ರೀನಿವಾಸ ಮೂರ್ತಿ, ಶಿರಸಿ ನಗರ ಅಧ್ಯಕ್ಷ ಪ್ರದೀಪ್ ಶೆಟ್ಟಿ, ರಾಘವೇಂದ್ರ ನಾಯ್ಕ, ವಿವಿಧ ತಾಲೂಕ ಅಧ್ಯಕ್ಷರಾದ ರಮಾನಂದ ನಾಯ್ಕ ಅಚಿವೆ ಅಂಕೋಲಾ, ಲಕ್ಷ್ಮಣ ಮಾಳ್ಳಕ್ಕನವರ ಶಿರಸಿ, ಶಿವಾನಂದ ಜೋಗಿ ಮುಂಡಗೋಡ, ಭೀಮ್ಸಿ ವಾಲ್ಮೀಕಿ ಯಲ್ಲಾಪುರ, ಸಾರಂಬಿ ಶೇಖ್, ಯಾಕೂಬ ಬೆಟ್ಕುಳಿ, ಇಬ್ರಾಹಿಂ ಗೌಡಳ್ಳಿ, ಸಿತಾರಾಮ ಗೌಡ ನೀರಗಾನ್, ಹರಿಶ್ಚಂದ್ರ ನಾಯ್ಕ ಓಂಕಾರ, ಶೇಖಯ್ಯ ಹಿರೇಮಠ, ಅನಂತ ಗೌಡ, ಶಬ್ಬೀರ್ ಚಪಾತಿ, ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ಬಾಲಚಂದ್ರ ಶೆಟ್ಟಿ, ಸುಭಾಶ್ ಗಾವಡಾ ಜೋಯಿಡಾ, ಸ್ವಾಮಿ ಉಳವಿ ಮುಂತಾದವರು ನೇತೃತ್ವ ವಹಿಸಿದ್ದರು.

ಅರಣ್ಯವಾಸಿಗಳ ಹಕ್ಕು ನೀಡುವ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವ ದಿಶೆಯಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸರಕಾರದ ಪರವಾಗಿ ನೀಡಿದ ಉತ್ತರವು ಸ್ಪಷ್ಟತೆಗೆ ಅಗ್ರಹಿಸಿ ಧರಣಿ ಸಂದರ್ಭದಲ್ಲಿ ಅರಣ್ಯವಾಸಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಸಭಾಧ್ಯಕ್ಷರು ಧರಣಿ ನಿರತ ಅರಣ್ಯವಾಸಿಗಳಿಗೆ ಸಮಜಾಯಿಸಿ ನೀಡುವ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿ ಅರಣ್ಯವಾಸಿಗಳ ಮಾತನ್ನ ನಿಯಂತ್ರಿಸುವ ಪ್ರಯತ್ನದಲ್ಲಿದ್ದಾಗ ಹೋರಾಟಗಾರರಿಗೂ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಯಿತು.

ದೇಶದ ಇತಿಹಾಸದಲ್ಲಿ ಸ್ವಾತಂತ್ರದ ಸಂಗ್ರಾಮದಿಂದ ಭೂ ಸುಧಾರಣೆ ಕಾಯಿದೆ ಬರುವವರೆಗೂ ನಿರಂತರ ಹೋರಾಟದಿಂದ ಯಶಸ್ವಿಗೊಳ್ಳಲು ಕಾರಣವಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರದರ್ಶಿಸದಿದ್ದಲ್ಲಿ ಜನ ಬಂಡೆಳುವುದರಲ್ಲಿ ಸಂಶಯವಿಲ್ಲ. ಹೋರಾಟ ತೀವ್ರ ಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಕಾಗೋಡ ತಿಮ್ಮಪ್ಪ ಅವರು ಹೇಳಿದರು.

ಸಭಾಧ್ಯಕ್ಷರ ಉತ್ತರಕ್ಕೆ ಸಮಾಧಾನವಾಗದ ಅರಣ್ಯವಾಸಿಗಳು ಧರಣಿ ಮುಂದುವರೆಸಿ, ಸರಕಾರವು ಮುಂದಿನ 15 ದಿನಗಳಲ್ಲಿ ಅರಣ್ಯವಾಸಿಗಳ ಪರವಾದ ನಿರ್ಣಯ ತೆಗೆದುಕೊಳ್ಳದಿದ್ದಲ್ಲಿ ಜಿಲ್ಲೆಗೆ ಆಗಮಿಸುವ ಎಲ್ಲಾ ಸಚಿವರನ್ನು ಮುತ್ತಿಗೆ ಹಾಕುವುದೊಂದಿಗೆ ಜಿಲ್ಲಾದ್ಯಂತ ತೀವ್ರ ಹೋರಾಟ ಕೈಗೊಳ್ಳಲಾಗುವುದೆಂದು ಇಂದಿನ ಪ್ರತಿಭಟನೆಯ ಅಂತ್ಯದಲ್ಲಿ ನಿರ್ಣಯಿಸಲಾಯಿತು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಗಾಂಧಿ ವೇಶದಲ್ಲಿ ಮೆರವಣಿಗೆ ಮತ್ತು ಸಭೆಯಲ್ಲಿ ಭಾಗವಹಿಸಿದ ಶಿರಸಿ ನಿವಾಸಿ ಸುರೇಶ್ ಅವರು ಕಾರ್ಯಕ್ರಮದ ಆಕರ್ಷಿತವಾಗಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top