ನ.18ರಂದು ಬಜ್ಪೆಯಲ್ಲಿ ಸೀರತ್ ಸಮಾವೇಶ
ಮಂಗಳೂರು, ನ.17: ಯುನಿವೆಫ್ ಕರ್ನಾಟಕದ 'ಮಾನವ ಸಮಾಜ, ಸಂಸ್ಕೃತಿ ಮತ್ತು ಪ್ರವಾದಿ ಮುಹಮ್ಮದ್ (ಸ.)' ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಅಭಿಯಾನದ ಪ್ರಯುಕ್ತ ನ.18ರಂದು ಸಂಜೆ 6:45ಕ್ಕೆ ಬಜ್ಪೆ ಲೈಕೋರಿಸ್ ಫ್ಲ್ಯಾಟ್ ಬಳಿ ಸೀರತ್ಸ ಮಾವೇಶ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ 'ನಮ್ಮ ಜೀವನ ಮತ್ತು ಪ್ರವಾದಿಯವರ ಬೋಧನೆಗಳು' ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story