ಕುವೈಟ್ನಲ್ಲಿ ಕಟ್ಟಡದಿಂದ ಬಿದ್ದು ಪೆರಾಜೆಯ ಯುವಕ ಮೃತ್ಯು
ಸುಳ್ಯ, ಸೆ.7: ಕುವೈಟ್ನಲ್ಲಿ ಬಹುಮಹಡಿ ಕಟ್ಟಡದಿಂದ ಬಿದ್ದು ಪೆರಾಜೆಯ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಪೆರಾಜೆ ಕೂಡಿಯಗುಂಡಿ ಇಬ್ರಾಹೀಂ ಎಂಬವರ ಪುತ್ರ ಮುನೀರ್ ಮೃತಪಟ್ಟ ಯುವಕ.
ಮುನೀರ್ ಕುವೈಟ್ನಲ್ಲಿ ಇಲೆಕ್ಟ್ರಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕರ್ತವ್ಯ ನಿರ್ವಹಣೆಯ ವೇಳೆ ಆಯತಪ್ಪಿ 20 ಅಂತಸ್ತಿನ ಕಟ್ಟಡದಿಂದ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story