ಮಹಿಳೆಯರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆ
ಮಂಗಳೂರು, ಸೆ.15: ಅಕ್ಟೋಬರ್ 3ರ ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಸೆ.26ರಿಂದ ’ಬ್ಯಾರಿ ಭಾಷಾ ಸಪ್ತಾಹ’ವನ್ನು ಹಮ್ಮಿಕೊಳ್ಳಲಾ ಗಿದ್ದು, ಆ ಪ್ರಯುಕ್ತ ಮಹಿಳೆಯರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಮಂಗಳೂರಿನ ಅತ್ತಾವರದ ಪ್ರಿಸಿಡಿಯಂ ಕಾಂಪ್ಲೆಕ್ಸ್ನಲ್ಲಿರುವ ಅಕಾ ಡಮಿಯ ಕಚೇರಿಯಲ್ಲಿ ಅ.2ರಂದು ಸ್ಪರ್ಧೆ ನಡೆಯಲಿದೆ.ವಿಜೇತರಿಗೆ ಪ್ರಥಮ 1,000 ರೂ., ದ್ವಿತೀಯ 750 ರೂ., ತೃತೀಯ 500 ರೂ. ನೀಡಲಾಗುವುದು
ಆಸಕ್ತರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯೊಂದಿಗೆ ಅ.1ರೊಳಗೆ ಅಕಾಡಮಿಯ ಕಚೇರಿಯಲ್ಲಿ ಹೆಸರು ನೋಂದಾಯಿಸಲು ಕೋರಲಾಗಿದೆ. ಮಾಹಿತಿಗೆ ದೂ.ಸಂ.: 0824-2412297, 4260038ನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story