ಉಪ್ಪಿನಂಗಡಿ: ಅಕ್ರಮ ಮದ್ಯ ಮಾರಾಟ ಪತ್ತೆ; ಆರೋಪಿ ಪರಾರಿ
ಉಪ್ಪಿನಂಗಡಿ, ಅ.3: ಮದ್ಯ ಮಾರಾಟ ನಿಷೇಧಿಸಲಾಗಿದ್ದ ದಿನದಂದು ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭ ಆರೋಪಿ ಪರಾರಿಯಾಗಿದ್ದಾನೆ.
ಪದ್ಮಯ್ಯ ಯಾನೆ ಪದ್ಮ ಪರಾರಿಯಾದ ಆರೋಪಿ. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ರವಿವಾರ ಮದ್ಯಮಾರಾಟ ನಿಷೇಧಿಸಲಾಗಿತ್ತು. ಆದರೆ ಈತ ರಾತ್ರಿ ಏಳರ ಸಮಯದಲ್ಲಿ ಉಪ್ಪಿನಂಗಡಿಯ ಸಾಥಿ ಬಾರ್ನ ಹಿಂಬದಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 27 ಬಾಟಲ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story