ಉಡುಪಿ: ಕ್ರೈಸ್ತರಿಂದ ಹೊಸ ವರ್ಷಕ್ಕೆ ಸ್ವಾಗತ
ಉಡುಪಿ, ಜ.1: ನೂತನ ವರ್ಷವನ್ನು ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಸ್ವಾಗತಿಸಿದರು.
ಗುರುವಾರ ಸಂಜೆ ಚರ್ಚ್ಗಳಿಗೆ ತೆರಳಿ ನೂತನ ವರ್ಷ ಪ್ರತಿ ಯೊಬ್ಬರಿಗೂ ಸಂತೋಷ ತರಲಿ ಎಂದು ಪ್ರಾರ್ಥಿಸಿದರು.
ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಅಧಿಕೃತ ಮಿಲಾಗ್ರಿಸ್ ಕೆಥೆಡ್ರಲ್ನಲ್ಲಿ ಪವಿತ್ರ ಬಲಿಪೂಜೆ ನೆರವೇರಿಸಿದರು. ಮಿಲಾಗ್ರಿಸ್ ಕೆಥೆಡ್ರಲ್ನ ರೆಕ್ಟರ್ ವಂ.ಸ್ಟ್ಯಾನಿ ಬಿ. ಲೋಬೊ, ಧರ್ಮಪ್ರಾಂತದ ಎಸ್ಟೇಟ್ ಮ್ಯಾನೇಜರ್ ವಂ.ಹೆನ್ರಿ ಮಸ್ಕರೇನ್ಹಸ್, ಚರ್ಚಿನ ಸಹಾಯಕ ಧರ್ಮಗುರು ವಂ ರೋಲ್ವಿನ್ ಆರಾನ್ಹಾ, ಪಿಲಾರ್ ಸಭೆಯ ಮುಖ್ಯಸ್ಥ ವಂ.ಡೆನಿಸ್ ಲೋಬೊ, ಸಹಾಯಕರಾದ ವಂ.ನೆಲ್ಸನ್ ಫುರ್ಟಾಡೊ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story