ಕಂಟ್ರೋಲ್ ರೂಂಗೆ ಹುಸಿಬಾಂಬ್ ಕರೆ
ಮಂಗಳೂರು, ನ. 11: ಕಂಟ್ರೋಲ್ ರೂಂಗೆ ಇಂದು ಬೆಳಗ್ಗೆ ಬಂದ ಹುಸಿಬಾಂಬ್ ಕರೆಯಿಂದಾಗಿ ಪೊಲೀಸರು ನಗರದ ಬಲ್ಮಠ ರಸ್ತೆಯಲ್ಲಿ ಬಾಂಬ್ಗಾಗಿ ಹುಡುಕಾಡಿದ ಘಟನೆ ಇಂದು ನಡೆದಿದೆ.
ಬಲ್ಮಠದಲ್ಲಿ ಬಾಂಬ್ ಅಳವಡಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿಯೋರ್ವ ಇಂದು ಬೆಳಗ್ಗೆ ಕಂಟ್ರೋಲ್ ರೂಂಗೆ ಫೋನ್ ಮಾಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಬಂದರು ಠಾಣಾ ಪೊಲೀಸರು ಫಲ್ನೀರ್ ರಸ್ತೆ ಮತ್ತು ಜ್ಯೋತಿ ಸರ್ಕಲ್ನ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ ಅವರಿಗೆ ಥರ್ಮಕೋಲ್ವೊಂದರ ಪೆಟ್ಟಿಗೆವೊಂದು ಲಭಿಸಿದ್ದು, ಅದರ ಮೇಲೆ ಬಾಂಬ್ ಎಂದು ಬರೆಯಲಾಗಿತ್ತು. ತೆರೆದು ನೋಡಿದಾಗ ಯಾವುದೇ ಬಾಂಬ್ ಪತ್ತೆಯಾಗಿರಲಿಲ್ಲ. ಇದೊಂದು ಹುಸಿ ಬಾಂಬ್ ಕರೆಯಾಗಿತ್ತು.
Next Story