ನಾಟೆಕಲ್: ಚಿಕನ್ ಸ್ಟಾಲ್ಗೆ ನುಗ್ಗಿ ಕಳವು
ಕೊಣಾಜೆ, ಡಿ.16: ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ನಲ್ಲಿರುವ ಚಿಕನ್ ಸ್ಟಾಲ್ವೊಂದಕ್ಕೆ ಕಳ್ಳರು ನುಗ್ಗಿ ನಗದು ಕಳವುಗೈದ ಘಟನೆ ಗುರುವಾರ ರಾತ್ರಿ ನಡೆದಿದೆ.
ನಾಟೆಕಲ್ನಲ್ಲಿರುವ ಖಲೀಲ್ ಚಿಕನ್ ಸ್ಟಾಲ್ಗೆ ರಾತ್ರಿ ಕಳ್ಳರು ನುಗ್ಗಿ ಟೇಬಲ್ ಡ್ರಾವರನ್ನು ಒಡೆದು ಅದರಲ್ಲಿದ್ದ 200 ರೂ.ವನ್ನು ಕಳವುಗೈದಿದ್ದಾರೆ. ಕೆಳದಿನಗಳ ಹಿಂದೆಯಷ್ಟೇ ಚಿಕನ್ಸ್ಟಾಲ್ನ ಮಾಲಕರ ಮನೆಗೂ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story