ಪುತ್ತೂರು: ಟೈಲರಿಂಗ್ ಶಾಪ್ನಿಂದ ಕಳವು
ಪುತ್ತೂರು, ಫೆ.26: ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರ ಟೈಲರಿಂಗ್ ಶಾಪ್ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೇಜಿನ ಡ್ರಾಯರ್ನಲ್ಲಿದ್ದ ನಗದು ಹಣ ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಶಾಲಾ ಬಳಿ ಶುಕ್ರವಾರ ತಡರಾತ್ರಿ ನಡೆದಿದ್ದು. ಘಟನೆಯ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.
ಮಾಡಾವು ಶಾಲೆಯ ಎದುರು ಪುತ್ತೂರು ಬೆಳ್ಳಾರೆ ರಸ್ತೆಯ ಪಕ್ಕದಲ್ಲಿರುವ ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯೆ ಲಾವಣ್ಯ.ಸಿ.ರೈ ಎಂಬವರಿಗೆ ಸೇರಿದ ಟೈಲರಿಂಗ್ ಶಾಪ್ನಿಂದ ಕಳವು ನಡೆದಿದೆ.
ತಡರಾತ್ರಿಯ ವೇಳೆ ಟೈಲರಿಂಗ್ ಶಾಪ್ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೇಜಿನ ಡ್ರಾಯರ್ನಲ್ಲಿದ್ದ ರೂ.6ಸಾವಿರ ನಗದು ಹಾಗೂ ಚಿಲ್ಲರೆ ಹಣ, ಗೋದ್ರೇಜ್ನಲ್ಲಿರಿಸಿದ್ದ ಮೂರು ರವಕೆ ಫೀಸ್, ಒಂದು ಕೈಗಡಿಯಾರ ಮತ್ತು ಡೈರಿ ಹಾಗೂ ಅಂಗಡಿಯೊಳಗೆ ಕ್ಯಾನ್ನಲ್ಲಿಟ್ಟಿದ್ದ ಅರ್ಧ ಲೀಟರ್ ಪೆಟ್ರೋಲನ್ನು ಕಳವು ಮಾಡಿರುವುದಾಗಿ ದೂರು ನೀಡಲಾಗಿದೆ.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story