ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಸಿಬಿಎಸ್ಇ ಪಠ್ಯಕ್ರಮದ ಮಾನ್ಯತೆ
ಮಂಗಳೂರು, ಮೇ 20: ನಗರದ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಿಲ್ಲಿಯ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯಿಂದ 2017-18ನೆ ಸಾಲಿನಿಂದ ಸಿಬಿಎಸ್ಇ ಪಠ್ಯಕ್ರಮ ಅಳವಡಿಸಲು ಮಾನ್ಯತೆ ಲಭಿಸಿದೆ.
1965ರಲ್ಲಿ ಆರಂಭವಾದ ಮಿಲಾಗ್ರಿಸ್ ಶಾಲೆಯು ಈವರೆಗೆ ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿತ್ತು. ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ, ನೃತ್ಯ, ಕಲೆ, ಕರಾಟೆ, ಸಂಗೀತ ಮತ್ತು ಇತರ ಪಠ್ಯೇತರ ಚಟುವಟಿಕೆಗೆ ಅವಕಾಶವಿದೆ.
ಪ್ರಸ್ತುತ ಸಾಲಿನಲ್ಲಿ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ, 1, 2, 5, 6 ಮತ್ತು 8ನೆ ತರಗತಿಗಳಿಗೆ ಕೆಲವು ಸೀಟುಗಳು ಲಭ್ಯವಿವೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824-2426765 ಅಥವಾ 0824-2423822 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story