ಸುಳ್ಯ: ಮೋದಿ ಫೆಸ್ಟ್- ಸಾಕ್ಷ್ಯ ಚಿತ್ರ ಪ್ರದರ್ಶನ
ಸುಳ್ಯ, ಜೂ.9: ನರೇಂದ್ರ ಮೋದಿ ನೇತೃತ್ವದ ಕೆಂದ್ರ ಸರಕಾರದ ಮೂರು ವರ್ಷಗಳ ಸಾಧನೆಯನ್ನು ಬಿತ್ತರಿಸುವ ಮೋದಿ ಫೆಸ್ಟ್ ಕಾರ್ಯಕ್ರಮಕ್ಕೆ ಸುಳ್ಯದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಚಾಲನೆ ನೀಡಿದರು.
ಈ ವೇಳೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆ, ಮಂಡಲ ವಕ್ತಾರ ವೆಂಕಟ್ ದಂಬೆಕೋಡಿ, ವಿನಯಕುಮಾರ್ ಕಂದಡ್ಕ, ಜಿಪಂ ಸದಸ್ಯ ಎಸ್.ಎನ್. ಮನ್ಮಥ, ನಪಂ ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಪ್ರಮುಖರಾದ ಸುರೇಶ್ ಕಣೆಮರಡ್ಕ, ಅಡ್ಡಂತ್ತಡ್ಕ ದೇರಣ್ಣ ಗೌಡ, ಉಮೇಶ್ ವಾಗ್ಲೆ, ಜಯಪ್ರಕಾಶ್ ಕುಂಚಡ್ಕ, ಸಂತೋಷ್ ಜಾಕೆ, ಪಿ.ಕೆ.ಉಮೇಶ್, ವಿನಯಕುಮಾರ್ ಮುಳುಗಾಡು, ನವೀನ್ ಕುಮಾರ್ ಸಾರಕೆರೆ, ಕಿರಣ್ ಕುರುಂಜಿ, ಗೋಪಾಲ ನಡುಬೈಲು, ಗಿರೀಶ್ ಕಲ್ಲುಗದ್ದೆ, ಗಣಪತಿ ಭಟ್ ಮಜಿಗುಂಡಿ, ಮೀನಾಕ್ಷಿ, ಮತ್ತಿತರರು ಉಪಸ್ಥಿತರಿದ್ದರು.
ನಂತರ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
Next Story