ಸಿಂಡಿಕೇಟ್ ಬ್ಯಾಂಕಿನ ಎಂಡಿ-ಸಿಇಒ: ಮೆಲ್ವಿನ್ ರೇಗೊ ಅಧಿಕಾರ ಸ್ವೀಕಾರ
ಮಣಿಪಾಲ, ಜು.3: ಸಿಂಡಿಕೇಟ್ ಬ್ಯಾಂಕಿನ ನೂತನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿ ಮೆಲ್ವಿನ್ ರೇಗೊ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಅವರು ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಹಾಗೂ ಸಿಇಓ ಆಗಿದ್ದರು.
1984ರಲ್ಲಿ ಐಡಿಬಿಐ ಬ್ಯಾಂಕ್ ಸೇರಿದ ಮೆಲ್ವಿನ್ ರೇಗೊ ಅಲ್ಲಿ ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. 2003ರಲ್ಲಿ ಐಡಿಬಿಐ ಹೋಮ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ಆಗಿ ನಿಯುಕ್ತರಾಗಿದ್ದರು. 2008ರಲ್ಲಿ ಐಡಿಬಿಐಗೆ ಮರಳಿದ ರೇಗೊ, ಅದರ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವಿಭಾಗದ ನೇತೃತ್ವ ವಹಿಸಿದ್ದರು.
ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿರುವ ರೇಗೊ ಅವರು ಪುಣೆಯಲ್ಲಿ ಎಂಬಿಎ ಪದವಿಯನ್ನು ರ್ಯಾಂಕ್ನೊಂದಿಗೆ ಪಡೆದಿದ್ದರು. ಒಳ್ಳೆಯ ಕ್ರೀಡಾಪಟುವೂ ಆಗಿರುವ ಇವರು ಸಂಗೀತ ಮತ್ತು ರಂಗಭೂಮಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ.
Next Story