ಕರ್ಕಶ ಹಾರ್ನ್: 103 ಬಸ್ಗಳಿಗೆ ದಂಡ
ಉಡುಪಿ, ಆ.19: ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ್ ಸೂಚನೆಯಂತೆ ಖಾಸಗಿ ಬಸ್ಗಳ ಕರ್ಕಶ ಹಾರ್ನ್ ವಿರುದ್ಧ ಇಂದು ಕಾರ್ಯಾಚರಣೆಗೆ ಇಳಿದ ಉಡುಪಿ ಹಾಗೂ ಮಣಿಪಾಲ ಪೊಲೀಸರು ಒಟ್ಟು 103 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಕರ್ಕಶ ಹಾರ್ನ್ ಅಳ ವಡಿಸಿಕೊಂಡಿದ್ದ 67 ಖಾಸಗಿ ಬಸ್ಗಳಿಗೆ ದಂಡ ವಿಧಿಸಿದರೆ, ಮಣಿಪಾಲ ಪೊಲೀಸರು ಒಟ್ಟು 36 ಖಾಸಗಿ ಬಸ್ಗಳಿಂದ ದಂಡ ವಸೂಲಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story