ನೀಲಾವರ: ವೃದ್ಧ ನಾಪತ್ತೆ
ಉಡುಪಿ, ಸೆ.6: ತಾಲೂಕಿನ ನೀಲಾವರ ಗ್ರಾಮದ ದೇವಾಡಿಗರಬೆಟ್ಟು ಕೆಳಮನೆ ಎಂಬಲ್ಲಿ ವಾಸವಿರುವ ಸುಮಾರು 75 ವರ್ಷ ಪ್ರಾಯದ ಸುಂದರ ದೇವಾಡಿಗ ಎಂಬವರು ಮೇಸ್ತ್ರಿ ಕೆಲಸಕ್ಕೆಂದು ಸೆ.3ರಂದು ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೋದವರು ಈವರೆಗೆ ಮನೆಗೆ ಹಿಂದಿರುಗದೇ ಕಾಣೆಯಾಗಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಸುಂದರ ಅವರು 5.6 ಅಡಿ ಉದ್ದವಿದ್ದು, ಗೋಧಿ ಮೈಬಣ್ಣ, ಕೋಲು ಮುಖ ಸಾಧಾರಣ ಶರೀರ ಹೊಂದಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿರುವ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನು ಸಂಪಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story