ಆನೇಕಲ್: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 7 ಲಕ್ಷ ನಗದು ವಶ
ಆನೇಕಲ್,ಎ.04: ದಾಖಲೆಗಳಿಲ್ಲದೆ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಬಂಧಿಸಿದ ಪೊಲೀಸರು ಆತನಿಂದ 7 ಲಕ್ಷ ನಗದು ವಶಪಡಿಸಿಕೊಂಡ ಘಟನೆ ಆನೇಕಲ್- ಹೊಸೂರು ರಸ್ತೆ ಸಮಂದೂರು ಗೇಟ್ ಬಳಿ ನಡೆದಿದೆ.
ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ತಮಿಳುನಾಡು ಗಡಿ ಭಾಗದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಬೆಂಗಳೂರು-ಆನೇಕಲ್ ನಿಂದ ಕೆಂಪಟ್ಟಿಗೆ ತೆರಳುತ್ತಿದ್ದ ಕಾರನ್ನು ತಪಾಸಣೆಗೊಳಪಡಿಸಿದಾಗ ಈ ಹಣ ಪತ್ತೆಯಾಗಿದೆ.
Next Story