ಸಂಸತ್ ಪ್ರವೇಶಿಸಿದ ನೂತನ ಸಂಸದೆ ಸುಮಲತಾ
‘ದೀರ್ಘ ಪ್ರಯಾಣದ ಬಳಿಕ ಪ್ರಜಾಪ್ರಭುತ್ವದ ದೇವಳ ಪ್ರವೇಶ’
ಚಿತ್ರ ಕೃಪೆ: facebook(Sumalatha Amarnath)
ಬೆಂಗಳೂರು, ಜೂ. 6: ಮಂಡ್ಯ ಲೋಕಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಇದೇ ಮೊದಲ ಬಾರಿಗೆ ಸಂಸತ್ ಭವನ ಪ್ರದೇಶಿಸಿದ್ದು ತಮ್ಮ ಫೋಟೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗುರುವಾರ ಸಂಸತ್ ಭವನದ ಎದುರು ನಿಂತಿರುವ ಫೋಟೋ ಹಾಕಿರುವ ಸುಮಲತಾ ಅಂಬರೀಶ್ ಅವರು, ‘ದೀರ್ಘ ಪ್ರಯಾಣದ ಬಳಿಕ ಪ್ರಜಾಪ್ರಭುತ್ವದ ಪವಿತ್ರ ದೇವಸ್ಥಾನಕ್ಕೆ ಪ್ರವೇಶ, ಜೈ ಹಿಂದ್ ಜೈ ಕರ್ನಾಟಕ’ ಎಂದು ಬರೆದು ಕೊನೆಯಲ್ಲಿ ನನಗೆ ಗೌರವ ಮತ್ತು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
Next Story