ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ತಂಪೆರೆದ ಮಳೆ
ಸಾಂದರ್ಭಿಕ ಚಿತ್ರ
ಮೈಸೂರು,ಜೂ.21: ನಗರದಲ್ಲಿ ಇಂದು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಬಿಸಿಲಿನ ಧಗೆಯಿಂದ ಕಂಗಾಲಾಗಿದ್ದ ಸಾಂಸ್ಕೃತಿಕ ನಗರಿ ಸ್ವಲ್ಪ ತಂಪಾದಂತೆ ಕಂಡು ಬಂದಿತು.
ಮಳೆಗಾಲ ಪ್ರಾರಂಭವಾದರೂ ಮಳೆ ಬಾರದೆ ಕಂಗಾಲಾಗಿದ್ದ ರೈತರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಜೂನ್ ತಿಂಗಳ ಪ್ರಾರಂಭದಲ್ಲೇ ಆಗಬೇಕಿದ್ದ ಮಳೆ ಬಾರದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಸಮಯ ಮಳೆಯಾಗಿದೆ.
Next Story