ಶಿಕಾರಿಪುರ: ಹಾವು ಕಡಿದು ಮಹಿಳೆ ಸಾವು
ಶಿವಮೊಗ್ಗ, ಸೆ. 26: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ವಿಷಪೂರಿತ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿವಪುರದ ಗೊಲ್ಲರಹಟ್ಟಿ ಬಳಿ ನಡೆದಿದೆ.
ನಾಗಮ್ಮ (50) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ವ್ಯಕ್ತಿಯೋರ್ವರ ಜಮೀನಿನಲ್ಲಿ ಇವರು ಕಳೆ ತೆಗೆಯುವ ಕೆಲಸಕ್ಕೆ ಹೋದ ವೇಳೆ ಇವರಿಗೆ ಹಾವು ಕಚ್ಚಿ ಅಸುನೀಗಿದ್ದಾರೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story