ಶಂಕಿತ ಡೆಂಗ್ ಗೆ ಯುವತಿ ಬಲಿ
ಹನೂರು, ನ.26: ಶಂಕಿತ ಡೆಂಗ್ ಕಾಯಿಲೆಗೆ ಯುವತಿ ಬಲಿಯಾಗಿರವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಉಯಿಲನತ್ತ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಉಯಲನತ್ತ ಗ್ರಾಮದ ಗೀತಾ (21) ಶಂಕಿತ ಡೆಂಗ್ ಗೆ ಮೃತಪಟ್ಟ ಯುವತಿ. ಕಳೆದ ಹಲವು ದಿನಗಳಿಂದ ಗ್ರಾಮದ ಹಲವರು ಡೆಂಗ್ ನಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಮದ 30 ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಡೆಂಗ್ ನಿಂದ ಸಾವನ್ನಪ್ಪಿದ ಗೀತಾಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Next Story