ಚಿಕ್ಕಮಗಳೂರು: ಮತ್ತೆ ಮೂವರಲ್ಲಿ ಕೊರೋನ ಸೋಂಕು
ಚಿಕ್ಕಮಗಳೂರು, ಮೇ 27: ಜಿಲ್ಲೆಯಲ್ಲಿ ಮತ್ತೆ ಕೊರೋನ ವೈರಸ್ ಸೋಂಕು ಕಂಡುಬಂದಿದ್ದು, ಐದು ದಿನಗಳ ಬಳಿಕ ಮೂವರಲ್ಲಿ ಸೋಂಕು ದೃಢಪಟ್ಟಿದೆ.
ಮುಂಬೈನಿಂದ ಆಗಮಿಸಿ ಕೊಪ್ಪದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮೂವರಿಗೆ ಕೊರೋನ ಪಾಸಿಟಿವ್ ಆಗಿದೆ. ಇವರಲ್ಲಿ ಒಬ್ಬರು ಕೊಪ್ಪ ಹಾಗೂ ಇಬ್ಬರು ಎನ್.ಆರ್. ಪುರ ಮೂಲದವರಾಗಿದ್ದಾರೆ. 35, 32 ಮತ್ತು 31 ವರ್ಷದ ಮೂವರು ಕೂಡಾ ಪುರುಷರಾಗಿದ್ದಾರೆ.
ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
Next Story