ಶಿವಮೊಗ್ಗ: ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನ ದೃಢ
ಶಿವಮೊಗ್ಗ, ಜೂ.28: ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನ ಸೋಂಕು ಕಾಣಿಸಿಕೊಂಡಿರುವುದರಿಂದ ಗೋಪಾಲ ಗೌಡ ಡಿ ಬ್ಲಾಕ್ನ್ನು ಇಂದು ಸೀಲ್ ಡೌನ್ ಮಾಡಲಾಗಿದೆ.
ಕೊರೋನದಿಂದ ಮೃತಪಟ್ಟ ಶಿಕಾರಿಪುರದ ವೃದ್ಧೆಯ ಸಂಪರ್ಕದಲ್ಲಿದ್ದ ಕುಟುಂಬದ ಇಬ್ಬರಿಗೆ ಸೋಂಕು ಕಾಣಿಸಿ ಕೊಂಡಿದ್ದು, ಉಳಿದ 5 ಮಂದಿಗೆ ರೋಗದ ಶಂಕೆ ಇರುವುದರಿಂದ ಶಿಕಾರಿಪುರ ತಾಲೂಕಿನಲ್ಲಿ ಆತಂಕ ಸೃಷ್ಟಿಯಾಗಿದೆ. ಜೂ.22 ರಂದು 75 ವರ್ಷದ ವೃದ್ಧೆ ಮೃತಪಟ್ಟಿದ್ದರು. ವೃದ್ಧೆಯ ಕುಟುಂಬದ 40 ವರ್ಷದ ಪುರುಷ ಮತ್ತು 20 ವರ್ಷದ ಯುವತಿಗೆ ಸೋಂಕು ತಗಲಿದೆ.
ಇಡೀ ಊರು ಬಂದ್: ವೃದ್ಧೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮದ 20 ಮನೆಗಳನ್ನು ಮಾತ್ರ ಸೀಲ್ಡೌನ್ ಮಾಡಲಾಗಿತ್ತು. ಈಗ ಮತ್ತಿಬ್ಬರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖವಾಸಪುರ ಗ್ರಾಮವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
Next Story