ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 3,649 ಮಂದಿಗೆ ಪಾಸಿಟಿವ್, 61 ಮಂದಿ ಸಾವು
70 ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.21: ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ 3,649 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, 61 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇಂದಿನ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 71,069 ಕ್ಕೆ ಏರಿಕೆಯಾಗಿದೆ ಮತ್ತು ಸಾವಿನ ಸಂಖ್ಯೆ 1464ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 22 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ಮೈಸೂರು 5, ಧಾರವಾಡ 5, ದಕ್ಷಿಣ ಕನ್ನಡ 5, ಕೋಲಾರ 4, ಬೆಳಗಾವಿ 4, ತುಮಕೂರು 3, ಹಾವೇರಿ 3, ಹಾಸನ 3, ಬೀದರ್ 2, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಗದಗ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 1714, ಬಳ್ಳಾರಿ 193, ದಕ್ಷಿಣ ಕನ್ನಡ 149, ಮೈಸೂರು 135, ಯಾದಗಿರಿ 117, ಉತ್ತರ ಕನ್ನಡ 109, ಹಾಸನ 107, ಕೋಲಾರ 103, ಕಲಬುರಗಿ 99, ದಾವಣಗೆರೆ 95, ಬೆಂಗಳೂರು ಗ್ರಾಮಾಂತರ 95, ಉಡುಪಿ 84, ಧಾರವಾಡ 84, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 68, ಬೀದರ್ 66, ಬಾಗಲಕೋಟೆ 65, ತುಮಕೂರು 47, ಕೊಪ್ಪಳ 45, ಹಾವೇರಿ 39, ಚಾಮರಾಜನಗರ 34, ಚಿತ್ರದುರ್ಗ 23, ಬೆಳಗಾವಿ 23, ಶಿವಮೊಗ್ಗ 20, ಗದಗ 15, ವಿಜಯಪುರ 13, ಮಂಡ್ಯ 13, ರಾಮನಗರ 8, ರಾಯಚೂರು 4, ಕೊಡಗು ಜಿಲ್ಲೆಯಲ್ಲಿ 1 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 71,069 ಕೊರೋನ ಸೋಂಕಿತರ ಪೈಕಿ 24,549 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 1,664 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 1,464 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 44,140 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.