ಸಿಬ್ಬಂದಿಗೆ ಕೊರೋನ: ಸಿಂದಗಿ ಪಟ್ಟಣದ ಎಸ್ ಬಿಐ ಬ್ಯಾಂಕ್ ಸೀಲ್ ಡೌನ್
ವಿಜಯಪುರ, ಜು.23: ಸಿಂದಗಿ ತಾಲೂಕಿನಲ್ಲಿ ಕೊರೋನ ಅಟ್ಟಹಾಸ ಮುಂದುವರಿದಿದೆ. ತಾಲೂಕಿನಲ್ಲಿಂದು 18 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಸಿಂದಗಿ ಪಟ್ಟಣದ 4 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಪಟ್ಟಣದ ಎಸ್ ಬಿಐ ಬ್ಯಾಂಕಿನ ಸಿಬ್ಬಂದಿಗೂ ಕೊರೋನ ಸೋಂಕು ದೃಢವಾದ ಕಾರಣ ಬ್ಯಾಂಕ್ ಸೀಲ್ ಡೌನ್ ಮಾಡಲಾಗಿದೆ.
ಅಲ್ಲದೇ, ಮಲಗಾಣ ಗ್ರಾಮದಲ್ಲಿ 6, ಮದರಿ 1, ರಾಂಪುರ 1, ಬೊಮ್ಮನಜೋಗಿ ಗ್ರಾಮದಲ್ಲಿ 1, ನೂತನ ದೇವರಹಿಪ್ಪರಗಿ ತಾಲೂಕಿನಲ್ಲಿ 4, ದೇವರಹಿಪ್ಪರಗಿ ಪಟ್ಟಣದಲ್ಲಿ 2, ಮುಳಸಾವಳಗಿ 1, ಚಿಕ್ಕರೂಗಿ ಗ್ರಾಮದಲ್ಲಿ 1, ಸೇರಿದಂತೆ 18 ಸೋಂಕು ಪ್ರಕರಣಗಳು ಸಿಂದಗಿ ತಾಲೂಕಿನಲ್ಲಿ ದಾಖಲಾಗಿವೆ. ಇದೀಗ ಇವರೆಲ್ಲರೂ ಪಟ್ಟಣದ ಅಗ್ನಿಶಾಮಕ ಕಚೇರಿ ಹತ್ತಿರವಿರುವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಸೆಂಟರ್ ನಲ್ಲಿದ್ದು, ನಿಗದಿತ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ತಾಲೂಕ ಆರೋಗ್ಯ ಅಧಿಕಾರಿ ರಾಮಕೃಷ್ಣ ಇಂಗಳೆ ತಿಳಿಸಿದ್ದಾರೆ.
Next Story