ಕೋವಿಡ್ ಸೆಂಟರ್ ನಲ್ಲಿ ತಪಾಸಣೆಯಲ್ಲಿದ್ದ ವ್ಯಕ್ತಿ ಆತ್ಮಹತ್ಯೆ
ಮೈಸೂರು,ಜು.24: ಕೋವಿಡ್ ಸೆಂಟರ್ ನಲ್ಲಿ ತಪಾಸಣೆಯಲ್ಲಿದ್ದ ಜೆ.ಕೆ.ಟೈಯರ್ ಉದ್ಯೋಗಿಯೋರ್ವರು ಮನೆಗೆ ಬಂದು ನೇಣಿಗೆ ಶರಣಾದ ಘಟನೆ ಗೋಕುಲಂನಲ್ಲಿ ನಡೆದಿದೆ.
ಜೆ.ಕೆ.ಟೈಯರ್ ಕಂಪನಿಯಲ್ಲಿ ನೂರಾರು ಮಂದಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಗಳನ್ನು ತಪಾಸಣೆಗೊಳಪಡಿಸಲಾಗಿದ್ದು, ವರದಿ ಬರುವವರೆಗೆ ಕೋವಿಡ್ ಸೆಂಟರ್ ನಲ್ಲಿಯೇ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಇವರು ಕೂಡ ಅಲ್ಲಿ ಐಸೋಲೇಷನ್ ನಲ್ಲಿಯೇ ಇದ್ದು, ಇನ್ನೂ ವರದಿ ಬಂದಿರಲಿಲ್ಲ. ಅವರು ತಾನು ಮನೆಯಲ್ಲಿಯೇ ಐಸೋಲೇಶನ್ ಪಡೆಯುತ್ತೇನೆಂದು ಹೇಳಿ ನಿನ್ನೆ ಮನೆಗೆ ಬಂದಿದ್ದರು.
ಇಂದು ಬೆಳಿಗ್ಗೆ ರೂಮಿನಿಂದ ಎಷ್ಟು ಹೊತ್ತಾದರೂ ಹೊರಗೆ ಬಂದಿರಲಿಲ್ಲ, ಮನೆಯವರು ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಸ್ಥಳಕ್ಕೆ ವಿವಿಪುರಂ ಠಾಣೆಯ ಪೊಲೀಸರು ಬಂದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story