ನಟಿ ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆ ಖಂಡನೀಯ: ನಟ ಚೇತನ್
ಬೆಂಗಳೂರು, ಸೆ.8: ನಗರದ ಉದ್ಯೋನವನದಲ್ಲಿ ವ್ಯಾಯಾಮ ಮಾಡುತ್ತಿದ್ದ ನಟಿ ಸಂಯುಕ್ತ ಹೆಗ್ಡೆ ಮೇಲೆ ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಫೈರ್ ಸಂಸ್ಥೆಯ ಕಾರ್ಯದರ್ಶಿ ನಟ ಚೇತನ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿನೆಮಾ ಮಹಿಳೆಯರ ಮೇಲೆ ವದಂತಿಗಳು ಮತ್ತು ವೈಯಕ್ತಿಕ ದಾಳಿ ನಡೆಯುತ್ತಿರುವುದು ದುರದೃಷ್ಟಕರ. ಯಾವುದೇ ಸರಿ-ತಪ್ಪುಗಳನ್ನು ತೀರ್ಮಾನಿಸಲು ನ್ಯಾಯಾಲಯವಿದೆ. ಆದರೂ ಪದೇ ಪದೇ ಪೊಲೀಸ್ ನೈತಿಕಗಿರಿ ಪ್ರದರ್ಶಿಸುವುದು ನಾಗರಿಕ ಲಕ್ಷಣವಲ್ಲವೆಂದು ಖಂಡಿಸಿದ್ದಾರೆ.
ನೈತಿಕ ಪೊಲೀಸ್ಗಿರಿ ಮತ್ತು ಮಹಿಳೆಯರ ಮೇಲಿನ ಹಲ್ಲೆಯಂತಹ ಯಾವುದೇ ಕೃತ್ಯಗಳನ್ನು ಎಸಗುವವರಿಗೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು. ಆ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
Next Story