ಲಂಚ ಪಡೆಯುವಾಗ ಗ್ರಾ.ಪಂ. ಕಾರ್ಯದರ್ಶಿ ಎಸಿಬಿ ಬಲೆಗೆ
ಶಿವಮೊಗ್ಗ, ಸೆ.10: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಬಿಡುಗಡೆ ಮಾಡಲು ಲಂಚ ಪಡೆಯುವಾಗ ಗ್ರಾಮ ಪಂಚಾಯತ್ ಕಾರ್ಯದರ್ಶಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಶಿಕಾರಿಪುರ ತಾಲೂಕು ಹೊಸೂರು ಗ್ರಾ.ಪಂಚಾಯತ್ ನ ಶಿವಪ್ಪ ಎಸಿಬಿ ದಾಳಿ ವೇಳೆ ಸಿಕ್ಕಿ ಬಿದ್ದಿದ್ದಾರೆ. ಶಿವಪ್ಪ ಅವರು ನರೇಗಾದ 2.10 ಲಕ್ಷ ಹಣ ಬಿಡುಗಡೆಗೆ 8 ಸಾವಿರ ರೂಪಾಯಿ ಲಂಚ ನೀಡುವಂತೆ ಗುತ್ತಿಗೆದಾರ ಮಂಜುನಾಥ ಬಳಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇಂದು ಹಣ ಪಡೆಯುವಾಗ ಗ್ರಾಮ ಪಂಚಾಯತ್ ಕಚೇರಿಗೆ ದಾಳಿ ನಡೆಸಿ, ಬಂಧಿಸಲಾಗಿದೆ.
ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ, ವಿರೇಂದ್ರ ಹಾಗೂ ಸಿಬ್ಬಂದಿ ಯೋಗೀಶ್ ಇದ್ದರು.
Next Story