ಶಾಸಕ ಅಮರೇಗೌಡ ಪಾಟೀಲ್ಗೆ ಕೊರೋನ ಸೋಂಕು ದೃಢ
ಕೊಪ್ಪಳ, ಸೆ.12: ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಕಳೆದ ಸೆ.8ರಂದು ತ್ರೈಮಾಸಿಕ ಕೆಡಿಪಿ ಸಭೆಗೆ ಭಾಗವಹಿಸುವ ಪೂರ್ವದಲ್ಲಿ ಕೊರೋನ ಪರೀಕ್ಷೆ ಮಾಡಿಸಿದ್ದರು. ನಂತರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸದರಿ ಸಭೆಯಲ್ಲಿ ಭಾಗವಹಿಸಿದ್ದರು. ಆ ದಿನ ರಾತ್ರಿ ಬೆಂಗಳೂರಿಗೆ ಹೋದಾಗ ಜ್ವರ ಬಂದ ಹಿನ್ನೆಲೆಯಲ್ಲಿ ಪುನಃ ಟೆಸ್ಟ್ ಮಾಡಿಸಿದಾಗ ಕೊರೋನ ದೃಢವಾಗಿದೆ.
ವೈದ್ಯರ ಸಲಹೆ ಮೇರೆಗೆ ನಾನು ಬೆಂಗಳೂರು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರ ಗುಣಮುಖಗೊಂಡು ಎಂದಿನಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗುತ್ತೇನೆ. ನನ್ನ ಸಂಪರ್ಕದಲ್ಲಿರುವವರು ಸ್ವಯಂ ಕೊರೋನ ಟೆಸ್ಟ್ ಮಾಡಿಸಿ, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಕ್ವಾರಂಟೈನ್ ಆಗುವಂತೆ ಶಾಸಕರು ಕೇಳಿಕೊಂಡಿದ್ದಾರೆ.
Next Story