ಚಿಕ್ಕಮಗಳೂರು: 127 ಮಂದಿಗೆ ಕೊರೋನ ಪಾಸಿಟಿವ್
ಚಿಕ್ಕಮಗಳೂರು, ಸೆ.20: ಜಿಲ್ಲೆಯಲ್ಲಿ ರವಿವಾರ 127 ಮಂದಿಗೆ ಸೋಂಕು ತಗುಲಿರುವುದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದ್ದು, ಸೋಂಕಿನಿಂದ ಗುಣಮುಖರಾದ 130 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರವಿವಾರ ವರದಿಯಾಗಿರುವ 127 ಪಾಸಿಟಿವ್ ಪ್ರಕರಣಗಳ ಪೈಕಿ ಚಿಕ್ಕಮಗಳೂರು ತಾಲೂಕೊಂದರಲ್ಲೇ 81 ಮಂದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಉಳಿದಂತೆ ತರೀಕೆರೆ ತಾಲೂಕಿನಲ್ಲಿ 22, ಕಡೂರು ತಾಲೂಕಿನಲ್ಲಿ 19, ಶೃಂಗೇರಿ ತಾಲೂಕಿನಲ್ಲಿ 2 ಹಾಗೂ ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ ತಾಲೂಕಿನಲ್ಲಿ ತಲಾ 1 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಪೈಕಿ 90 ಮಂದಿಯನ್ನು ಹೋಮ್ ಐಸೋಲೇಶನ್ ಮಾಡಲಾಗಿದ್ದರೇ ಮತ್ತೆ ಒಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 36 ಮಂದಿಯನ್ನು ನಗರದ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿವಾರ ವರದಿಯಾಗಿರುವ 127 ಪಾಸಿಟಿವ್ ಪ್ರಕರಣಗಳು ಸೇರಿದಂತೆ ಇದುವರೆಗೂ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 7210ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 1486 ಸಕ್ರೀಯ ಪ್ರಕರಣಗಳಿದ್ದು, ರವಿವಾರ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ 130 ಮಂದಿ ಸೇರಿ ಇದುವರೆಗೆ ಚಿಕಿತ್ಸೆಯಿಂದ ಗುಣಮುಖರಾದ 5487 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ ಸೋಂಕಿಗೆ ತುತ್ತಾಗಿದ್ದವರ ಪೈಕಿ 107 ಮಂದಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.