ಹನೂರು: ಜಿಂಕೆ ಮಾಂಸ ಸಾಗಾಟ; ಆರೋಪಿ ಬಂಧನ
ಹನೂರು, ಸೆ.23: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ಅರಣ್ಯ ಪ್ರದೇಶದ ಪಚ್ಚೆದೊಡ್ಡಿ ಗಸ್ತಿನ ಉಪ್ಪಳ ಹಳ್ಳ ಪ್ರದೇಶದಲ್ಲಿ ಜಿಂಕೆಯನ್ನು ಭೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಮುರುಗೇಗೌಡ(45) ಬಂಧಿತ ಆರೋಪಿ. ಈತ ತನ್ನ ನಾಲ್ವರು ಜೊತೆಗಾರರೊಡನೆ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಂದೂಕಿನಿಂದ ಜಿಂಕೆಯನ್ನು ಭೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದರು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮುರುಗೇಗೌಡನನ್ನು ಬಂಧಿಸಿ, ಒಂಟಿ ನಳಿಕೆ ನಾಡ ಬಂದೂಕು ಮದ್ದುಗುಂಡು ಹಾಗೂ 20 ಕೆಜಿ ಜಿಂಕೆ ಮಾಂಸವನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
Next Story