ಶಿವಮೊಗ್ಗ: ಮಾಸ್ಕ್ ಧರಿಸದವರಿಗೆ 2.37 ಲಕ್ಷ ರೂ. ದಂಡ ವಿಧಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಸೆ.30: ಕೋವಿಡ್-19 ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಹಾಗಿದ್ದೂ ಸಾರ್ವಜನಿಕರು ಮಾಸ್ಕ್ ಧರಿಸದೆ ಓಡಾಡುತ್ತಿದ್ದು, ಅವರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಹಲವು ಕಡೆ ದಿಢೀರ್ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಸೆ.24 ಮತ್ತು 25 ಹಾಗೂ 28 ರಂದು ಕಾರ್ಯಾಚರಣೆ ನಡೆಸಿ ಒಟ್ಟು 1,587 ಪ್ರಕರಣ ದಾಖಲಿಸಿದ್ದು, 2,37,400 ರೂ. ದಂಡ ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸೆಪ್ಟೆಂಬರ್ 24ರಂದು 447 ಪ್ರಕರಣ ದಾಖಲಿಸಿ 81,400 ರೂ. ದಂಡ ವಿಧಿಸಲಾಗಿದೆ. ಸೆಪ್ಟೆಂಬರ್ 25ರಂದು 748 ಪ್ರಕರಣ ದಾಖಲಿಸಿ 1,03,200 ರೂ. ದಂಡ ವಿಧಿಸಲಾಗಿದೆ. ಸೆ.28ರಂದು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 393 ಪ್ರಕರಣಗಳನ್ನು ದಾಖಲಿಕೊಂಡು ಒಟ್ಟು ರೂ. 52,800 ದಂಡ ವಿಧಿಸಿದ್ದಾರೆ. ಸಾರ್ವಜನಿಕವಾಗಿ ಮಾಸ್ಕ್ ಧರಿಸದೆ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
Next Story