ಮತ್ತೆ 125 ಮಂದಿ ಸಾವು: ರಾಜ್ಯದಲ್ಲಿ ಕೋವಿಡ್ ಸಾವಿನ ಸಂಖ್ಯೆ 9,119ಕ್ಕೆ ಏರಿಕೆ
ಬೆಂಗಳೂರು, ಅ.2: ರಾಜ್ಯದಲ್ಲಿ ಶುಕ್ರವಾರ 8,793 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 125 ಜನರು ಸೋಂಕಿಗೆ ಬಲಿಯಾಗಿದ್ದು, 7,094 ಜನರು ಗುಣಮುಖರಾಗಿದ್ದಾರೆ.
ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 6,20,630ಕ್ಕೆ ತಲುಪಿದ್ದು, 827 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 9,119ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 1,11,986ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
125 ಸೋಂಕಿತರು ಬಲಿ: ಬಾಗಲಕೋಟೆ 2, ಬಳ್ಳಾರಿ 2, ಬೆಳಗಾವಿ 7, ಬೆಂಗಳೂರು ನಗರ 41, ಬೀದರ್ 2, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 12, ದಾವಣಗೆರೆ 1, ಧಾರವಾಡ 6, ಹಾಸನ 6, ಹಾವೇರಿ 2, ಕಲಬುರಗಿ 1, ಕೊಪ್ಪಳ 3, ಮಂಡ್ಯ 2, ಮೈಸೂರು 18, ಶಿವಮೊಗ್ಗ 3, ತುಮಕೂರು 8, ಉಡುಪಿ 1, ವಿಜಯಪುರ 1 ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 8,793 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 68, ಬಳ್ಳಾರಿ 262, ಬೆಳಗಾವಿ 40, ಬೆಂಗಳೂರು ಗ್ರಾಮಾಂತರ 298, ಬೆಂಗಳೂರು ನಗರ 4,259, ಬೀದರ್ 43, ಚಾಮರಾಜನಗರ 40, ಚಿಕ್ಕಬಳ್ಳಾಪುರ 91, ಚಿಕ್ಕಮಗಳೂರು 123, ಚಿತ್ರದುರ್ಗ 169, ದಕ್ಷಿಣ ಕನ್ನಡ 322, ದಾವಣಗೆರೆ 225, ಧಾರವಾಡ 98, ಗದಗ 80, ಹಾಸನ 315, ಹಾವೇರಿ 61, ಕಲಬುರ್ಗಿ 98, ಕೊಡಗು 30, ಕೋಲಾರ 29, ಕೊಪ್ಪಳ 89, ಮಂಡ್ಯ 257, ಮೈಸೂರು 158, ರಾಯಚೂರು 193, ರಾಮನಗರ 150, ಶಿವಮೊಗ್ಗ 307, ತುಮಕೂರು 405, ಉಡುಪಿ 212, ಉತ್ತರ ಕನ್ನಡ 80, ವಿಜಯಪುರ 146, ಯಾದಗಿರಿ ಜಿಲ್ಲೆಯಲ್ಲಿ 145 ಪ್ರಕರಣಗಳು ಪತ್ತೆಯಾಗಿವೆ.