ಮುಸ್ಲಿಮ್ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿದ್ದ ಸಾವರ್ಕರ್: ನಟ ಚೇತನ್
ಬೆಂಗಳೂರು, ಅ.6: ಮುಸ್ಲಿಮ್ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರವನ್ನು ವಿನಾಯಕ ದಾಮೋದರ ಸಾವರ್ಕರ್ ಸಮರ್ಥಿಸಿದ್ದರು ಎಂದು ನಟ, ಚಿಂತಕ ಚೇತನ್ ಆರೋಪಿಸಿದ್ದಾರೆ.
ಮಂಗಳವಾರ ಈ ಕುರಿತು ಟ್ವೀಟ್ ಮತ್ತು ಫೇಸ್ಬುಕ್ ಪೋಸ್ಟ್ ಮಾಡಿರುವ ಅವರು, ''ಸಾವರ್ಕರ್ 'ಸಿಕ್ಸ್ ಗ್ಲೋರಿಯಸ್ ಎಪೋಕ್ಸ್ ಆಫ್ ಇಂಡಿಯನ್ ಹಿಸ್ಟರಿ' ಎಂಬ ಪುಸ್ತಕದಲ್ಲಿ ಮುಸ್ಲಿಮ್ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಸಮರ್ಥಿಸುತ್ತಾನೆ. ಸಂದರ್ಭ ಅನುಮತಿಸಿದಾಗ ಹಾಗೆ ಮಾಡದಿರುವುದು ಹೇಡಿತನ ಎಂದು ಅವರು ಹೇಳುತ್ತಾರೆ'' ಎಂದು ಚೇತನ್ ಅಧ್ಯಾಯದ ಪುಟಗಳನ್ನು ಉಲ್ಲೇಖಿಸಿದ್ದಾರೆ.
ಇನ್ನು, ಸಾವರ್ಕರ್ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾರತದ ಗಮನಾರ್ಹ ಮಗ ಎಂದು ಕರೆದರು. ಜತೆಗೆ 1970ರಲ್ಲಿ ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿದರು. ಇಂದಿನ ಬಿಜೆಪಿ ಸಾವರ್ಕರ್ ನಿಷ್ಠೆಯನ್ನು ಹೊಂದಿದೆ. ಇದು ಅಸಹ್ಯಕರ ಎಂದು ಚೇತನ್ ತಿಳಿಸಿದ್ದಾರೆ.
Next Story