ಲಕ್ಷಾಂತರ ರೂ. ಮೌಲ್ಯದ ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಕಳವು
ಬೆಂಗಳೂರು, ಅ.24: ಸಂಚಾರ ನಿಯಂತ್ರಣ ಸಂಬಂಧ ಯಂತ್ರವೊಂದನ್ನು ದುಷ್ಕರ್ಮಿಗಳು ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಪುರಂ ವ್ಯಾಪ್ತಿಯ ಮೆಡಿಕಲ್ ಕಾಲೇಜು ಬಳಿಯ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಸಿಸ್ಟಮ್ ಜೊತೆ ಸಿಗ್ನಲ್ ಕಂಟ್ರೋಲರ್, ಎಸಿ-ಡಿಸಿ ಪವರ್ ಸಪ್ಲೈಯರ್ ಯೂನಿಟ್, ಚಾರ್ಜರ್ ಕಂಟ್ರೋಲರ್, ರೆಗ್ಯೂಲೇಟರ್ ಕಳ್ಳತನವಾಗಿದ್ದು, ಇವುಗಳ ಮೌಲ್ಯ 3.20 ಲಕ್ಷ ರೂ. ಆಗಿದೆ ಎಂದು ವಿ.ವಿ.ಪುರಂ ಸಂಚಾರ ಠಾಣೆಯ ಎಎಸ್ಸೈ ಗೋವಿಂದರಾಜು ದೂರು ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ.
Next Story