ಹೆಂಡತಿಯನ್ನು ಮಚ್ಚಿನಿಂದ ಹೊಡೆದು ಕೊಲೆಗೈದ ಪತಿ
ಹನೂರು, ಅ.24: ಹೆಂಡತಿಯ ನಡತೆಯನ್ನು ಅನುಮಾನಿಸಿ ಆಕೆಯನ್ನು ಪತಿಯು ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಲೈ ಮಹದೇಶ್ವರಬೆಟ್ಟದ ಆನೆ ಹೊಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಜರುಗಿದೆ.
ತಾಲೂಕಿನ ಮ.ಬೆಟ್ಟ ಗ್ರಾಮ ಪಂಚಾಯತ್ ನ ಆನೆಹೊಲ ಗ್ರಾಮದ ಸಿದ್ದಿ ಮೃತ ಮಹಿಳೆ. ಪತಿ ಮಾದೇವ ಬಿನ್ ಚಿಕ್ಕಾಮುನಿಯ(40) ಕೊಲೆ ಆರೋಪಿಯಾಗಿದ್ದು, ತನ್ನ ಹೆಂಡತಿ ಸಿದ್ದಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮ.ಬೆಟ್ಟ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Next Story