ಡಿಸಿಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ದುಷ್ಕರ್ಮಿಗಳು
ಬೆಂಗಳೂರು, ನ.14: ನಗರದ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಅವರ ಹೆಸರಿನಲ್ಲಿ ದುಷ್ಕರ್ಮಿಗಳು ನಕಲಿ ಫೇಸ್ಬುಕ್ ಖಾತೆ ತೆರೆದು ದುರುಪಯೋಗ ಪಡಿಸಿಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಪೊಲೀಸ್ ಸಮವಸ್ತ್ರ ಹಾಕಿರುವ ಫೋಟೋವನ್ನು ಬಳಕೆ ಮಾಡಿ ನಕಲಿ ಖಾತೆ ತೆರೆದಿದ್ದು, ಜತೆಗೆ ಖಾತೆಯಲ್ಲಿ ಶರಣಪ್ಪ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿ ನೀಡಿರುವ ಶರಣಪ್ಪ ಅವರು, ಇದು ನನ್ನ ಅಧಿಕೃತ ಅಕೌಂಟ್ ಅಲ್ಲ, ದುಷ್ಕರ್ಮಿಗಳು ಸೃಷ್ಟಿಸಿದ್ದು, ಯಾರು ಇದನ್ನು ನಂಬಬೇಡಿ ಎಂದು ತಿಳಿಸಿದ್ದಾರೆ.
Next Story