ಅಕ್ಟೋಬರ್‌ 4ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ತರಗತಿಗಳು ಆರಂಭ | Vartha Bharati- ವಾರ್ತಾ ಭಾರತಿ

--

2021-22ರ ಶೈಕ್ಷಣಿಕ ಕ್ಯಾಲೆಂಡರ್‌ ಪ್ರಕಟಿಸಿದ ಡಿಸಿಎಂ ಅಶ್ವತ್ಥನಾರಾಯಣ

ಅಕ್ಟೋಬರ್‌ 4ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ತರಗತಿಗಳು ಆರಂಭ

ಬೆಂಗಳೂರು: 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನ್ನು ಉನ್ನತ ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದು, ಎಂಜಿನಿಯರಿಂಗ್‌, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು 2021ರ ಅ.‌ 4ರಿಂದ ಆರಂಭವಾಗಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್‌ ಕಾರಣದಿಂದ 2021-22ನೇ ಸಾಲಿನ ಶೈಕ್ಷಣಿಕ ಚಟವಟಿಕೆಗಳಲ್ಲಿ ವ್ಯತ್ಯಯವಾಗಿದ್ದ ಹಿನ್ನೆಲೆಯಲ್ಲಿ ಆ ಎಲ್ಲ ಅಂಶಗಳನ್ನು ಪರಿಗಣಿಸಿ ಶೈಕ್ಷಣಿಕ ಕ್ಯಾಲೆಂಡರ್‌ ನ ಕರಡು ರೂಪಿಸಲಾಗಿದೆ ಎಂದರು.

2021-22ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್‌ ಹೀಗಿದೆ:

ಪದವಿ ತರಗತಿಗಳು: ಪದವಿ ವಿಭಾಗದ 5ನೇ ಸೆಮಿಸ್ಟರ್‌ ತರಗತಿಗಳು ಫೆಬ್ರವರಿ 28ರಂದು ಮುಗಿಯಲಿದ್ದು, ಪರೀಕ್ಷೆಗಳು 2021 ಮಾರ್ಚ್‌ 31ರಂದು ಮುಗಿಯಲಿವೆ. 1 ಮತ್ತು 3ನೇ ಸೆಮಿಸ್ಟರ್‌ ತರಗತಿಗಳು 2021ರ ಮಾರ್ಚ್‌ 31ಕ್ಕೆ ಅಂತ್ಯವಾಗಲಿದ್ದು, ಪರೀಕ್ಷೆಗಳು 2021 ಎಪ್ರಿಲ್‌ 30ರಂದು ಆರಂಭವಾಗಲಿವೆ. 6ನೇ ಸೆಮಿಸ್ಟರ್‌ ತರಗತಿಗಳು 2021 ಎಪ್ರಿಲ್‌ 1ರಂದು ಶುರುವಾಗಿ, 2021ರ ಜುಲೈ 31ಕ್ಕೆ ಮುಗಿಯುತ್ತವೆ. 6ನೇ ಸೆಮಿಸ್ಟರ್‌ ಪರೀಕ್ಷೆಗಳು 2021 ಅಗಸ್ಟ್‌ 31ಕ್ಕೆ ಮುಗಿಯುತ್ತವೆ. ಈ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶವು 2021 ಸೆಪ್ಟೆಂಬರ್‌ 10ರಂದು ಪ್ರಕಟವಾಗಲಿದೆ. 2 ಮತ್ತು 4ನೇ ಸೆಮಿಸ್ಟರ್‌ ತರಗತಿಗಳು 2021 ಮೇ 2ಕ್ಕೆ ಶುರುವಾಗಿ 2021 ಅಗಸ್ಟ್‌ 31ಕ್ಕೆ ಮುಕ್ತಾಯವಾಗುತ್ತವೆ. ಈ ಸೆಮಿಸ್ಟರ್‌ನ ಪರೀಕ್ಷೆಗಳು 2021 ಸೆಪ್ಟೆಂಬರ್‌ 30ಕ್ಕೆ ಮುಗಿಯುತ್ತವೆ.

ಪದವಿ ವಿಭಾಗದ 1, 3, 5ನೇ ಸೆಮಿಸ್ಟರ್‌ ತರಗತಿಗಳು 2021 ಅಕ್ಟೋಬರ್‌ 4ಕ್ಕೆ ಆರಂಭವಾಗುತ್ತವೆ. 2022 ಜನವರಿ 31ಕ್ಕೆ ಮುಕ್ತಾಯವಾಗುತ್ತವೆ. ಪರೀಕ್ಷೆಗಳು 2022ರ ಫೆಬ್ರವರಿ 28ಕ್ಕೆ ಮುಗಿಯಲಿದೆ. 2, 4, 6ನೇ ಸೆಮಿಸ್ಟರ್‌ ತರಗತಿಗಳು 2022ರ ಮಾರ್ಚ್‌ 1ರಂದು ಶುರುವಾಗಿ, 2022ರ ಜೂನ್‌ 30ಕ್ಕೆ ತರಗತಿಗಳು ಮುಗಿಯುತ್ತವೆ. ಪರೀಕ್ಷೆಗಳು 2022ರ ಜುಲೈ 31ಕ್ಕೆ ಮುಗಿಯಲಿದ್ದು, ಫಲಿತಾಂಶವು 2022 ಅಗಸ್ಟ್‌ 14ರಂದು ಪ್ರಕಟವಾಗುತ್ತದೆ.

ಎಂಜಿನಿಯರಿಂಗ್‌ ತರಗತಿಗಳು:

ಎಂಜಿನಿಯರಿಂಗ್‌ ವಿಭಾಗದ 7ನೇ ಸೆಮಿಸ್ಟರ್‌ ತರಗತಿಗಳು 2021 ಫೆಬ್ರವರಿ 28ಕ್ಕೆ ಮುಗಿಯುತ್ತವೆ. ಪರೀಕ್ಷೆಗಳು 2021 ಮಾರ್ಚ್‌ 31ರಂದು ಮುಗಿಯಲಿವೆ. 1, 3 ಮತ್ತು 5ನೇ ಸೆಮಿಸ್ಟರ್‌ ತರಗತಿಗಳು 2021 ಮಾರ್ಚ್‌ 31ಕ್ಕೆ ಮುಗಿಯಲಿವೆ. ಪರೀಕ್ಷೆಗಳು 2021 ಏಪ್ರಿಲ್‌ 31ಕ್ಕೆ ಅಂತ್ಯವಾಗುತ್ತವೆ. 8ನೇ ಸೆಮಿಸ್ಟರ್‌ ತರಗತಿಗಳು 2021 ಎಪ್ರಿಲ್‌ 1ರಂದು ಪ್ರಾರಂಭವಾಗಿ, 2021 ಜು.31ಕ್ಕೆ ಮುಗಿಯುತ್ತವೆ. ಪರೀಕ್ಷೆಗಳು 2021 ಅ.31ಕ್ಕೆ ಮುಗಿದು ಫಲಿತಾಂಶವು 2021ರ ಸೆ.‌ 10ರಂದು ಪ್ರಕಟವಾಗಲಿದೆ. 2,4 ಮತ್ತು 6ನೇ ಸೆಮಿಸ್ಟರ್‌ ತರಗತಿಗಳು 2021ರ ಮೇ 2ರಂದು ಆರಂಭವಾಗಿ, 2021ರ ಆ.‌ 31ಕ್ಕೆ ಮುಗಿಯಲಿವೆ. ಪರೀಕ್ಷೆಗಳು 2021ರ ಸೆಪ್ಟೆಂಬರ್‌ 31ಕ್ಕೆ ಮುಗಿಯುತ್ತವೆ. 

ಎಂಜಿನಿಯರಿಂಗ್‌ ವಿಭಾಗದ 1,3,5,7ನೇ ಸೆಮಿಸ್ಟರ್‌ ತರಗತಿಗಳು 2021ರ ಅಕ್ಟೋಬರ್‌ 4ರಂದು ಆರಂಭವಾಗಲಿವೆ. ಈ ತರಗತಿಗಳು 2022 ಜನವರಿ 31ಕ್ಕೆ ಅಂತ್ಯವಾಗಲಿದ್ದು, 2022 ಫೆಬ್ತವರಿ 28ಕ್ಕೆ ಪರೀಕ್ಷೆಗಳು ಮುಗಿಯಲಿವೆ. ಇನ್ನು 2,4,6,8ನೇ ಸೆಮಿಸ್ಟರ್‌ನ ತರಗತಿಗಳು 2022 ಮಾರ್ಚ್‌ 1ರಂದು ಆರಂಭವಾಗಲಿದ್ದು, 2022 ಜೂನ್‌ 30ಕ್ಕೆ ತರಗತಿಗಳು ಕೊನೆಗೊಳ್ಳಲಿವೆ. ಈ ಸೆಮಿಸ್ಟರ್‌ಗಳ ಪರೀಕ್ಷೆಗಳು 2022 ಜುಲೈ 31ಕ್ಕೆ ಅಂತ್ಯವಾಗಲಿದ್ದು, 2022 ಆಗಸ್ಟ್‌ 14ರಂದು ಫಲಿತಾಂಶ ಪ್ರಕಟವಾಗಲಿದೆ.

ಸ್ನಾತಕೋತ್ತರ ತರಗತಿಗಳು:

3ನೇ ಸೆಮಿಸ್ಟರ್‌ ತರಗತಿಗಳು 2021 ಫೆಬ್ರವರಿ 28ಕ್ಕೆ ಮುಗಿಯಲಿದ್ದು, ಇದರ ಪರೀಕ್ಷೆಗಳು 2021ರ ಮಾರ್ಚ್‌ 31ಕ್ಕೆ ಅಂತ್ಯವಾಗಲಿವೆ. 1ನೇ ಸೆಮಿಸ್ಟರ್‌ ತರಗತಿಗಳು 2021 ಏಪ್ರಿಲ್‌ 1ಕ್ಕೆ ಮುಗಿದು, ಪರೀಕ್ಷೆಗಳು 2021ರ ಮಾರ್ಚ್‌ 31ಕ್ಕೆ ಅಂತ್ಯವಾಗಲಿವೆ. 4ನೇ ಸೆಮಿಸ್ಟರ್‌ ತರಗತಿಗಳು 2021 ಎಪ್ರಿಲ್‌ 1ರಿಂದ ಆರಂಭವಾಗಿ 2021 ಜುಲೈ 31ಕ್ಕೆ ಮುಗಿಯಲಿವೆ. ಈ ಸೆಮಿಸ್ಟರ್‌ನ ಪರೀಕ್ಷೆಗಳು 2021 ಅಗಸ್ಟ್‌ 31ಕ್ಕೆ ಆರಂಭವಾಗಿ ಪರೀಕ್ಷೆ ಫಲಿತಾಂಶವು 2021ರ ಸೆಪ್ಟೆಂಬರ್‌ 10ರಂದು ಪ್ರಕಟವಾಗಲಿದೆ. 2ನೇ ಸೆಮಿಸ್ಟರ್‌ನ ತರಗತಿಗಳು 2021 ಮೇ 2ರಿಂದ ಆರಂಭವಾಗಿ 2021 ಆಗಸ್ಟ್‌ 31ಕ್ಕೆ ಮುಗಿಯುತ್ತವೆ ಹಾಗೂ ಈ ಪರೀಕ್ಷೆಗಳ ಫಲಿತಾಂಶವು 2021ರ ಸೆಪ್ಟೆಂಬರ್‌ 30ರಂದು ಪ್ರಕಟವಾಗಲಿದೆ.

1-3ನೇ ಸೆಮಿಸ್ಟರ್‌ಗಳ ತರಗತಿಗಳು (ಕಾಲೇಜುಗಳು) 2021 ಅಕ್ಟೋಬರ್‌ 4ರಂದು ಆರಂಭವಾಗುತ್ತವೆ. ಈ ಮೂರು ಸೆಮಿಸ್ಟರ್‌ಗಳ ತರಗತಿಗಳು 2022 ಜನವರಿ 31ಕ್ಕೆ ಅಂತ್ಯವಾಗಲಿವೆ. 2022 ಫೆಬ್ರವರಿ 28ಕ್ಕೆಲ್ಲ ಈ ಸೆಮಿಸ್ಟರ್‌ಗಳ ಪರೀಕ್ಷೆಗಳು ಮುಗಿಲಿವೆ. 2 ಮತ್ತು 4ನೇ ಸೆಮಿಸ್ಟರ್‌ ತರಗತಿಗಳು 2022 ಮಾರ್ಚ್‌ 1ರಿಂದ ಆರಂಭವಾಗಿ 2022 ಜೂನ್‌ 22ಕ್ಕೆ ಅಂತ್ಯವಾಗಲಿವೆ. 2ರಿಂದ 4ನೇ ಸೆಮಿಸ್ಟರ್‌ ಪರೀಕ್ಷೆಗಳು 2022 ಜುಲೈ 31ರಿಂದ ಶುರುವಾಗಲಿವೆ. ಈ ಪರೀಕ್ಷೆಗಳ ಫಲಿತಾಂಶ 2022 ಅಗಸ್ಟ್‌ 14ರಂದು ಪ್ರಕಟವಾಗಲಿದೆ.

ಕೋವಿಡ್-19 ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳ ಕರಡು ಕ್ಯಾಲೆಂಡರ್ ರೂಪಿಸಲಾಗಿದೆ. ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ 90 ಕೆಲಸದ ದಿನಗಳ ಯುಜಿಸಿ ಮಾರ್ಗಸೂಚಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. 6 ದಿನಗಳ ವಾರವನ್ನು ಪರಿಗಣಿಸಿ ಚಟುವಟಿಕೆಗಳ ಕ್ಯಾಲೆಂಡರ್ ಸಿದ್ಧಪಡಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top