ಕೊಡಗು : ಗುಡುಗು ಸಹಿತ ಭಾರೀ ಆಲಿಕಲ್ಲು ಮಳೆ
ಕೊಡಗು : ಇಲ್ಲಿನ ಶನಿವಾರಸಂತೆ, ಅಂಕನಳ್ಳಿ, ನಿಡ್ತ ಸುತ್ತಮುತ್ತಲಿನಲ್ಲಿ ಶುಕ್ರವಾರ ಗುಡುಗು ಸಹಿತ ಆಲಿಕಲ್ಲಿನ ಭಾರೀ ಮಳೆಯಾಗಿದೆ.
ಭಾರೀ ಆಲಿಕಲ್ಲಿ ಮಳೆಯಿಂದ ಈ ಭಾಗದ ಕೆಲವೆಡೆ ಗಿಡದಲ್ಲೆ ಇರುವ ರೋಬಸ್ಟ ಕಾಫಿ ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗಿದೆ. ಹಸಿರು ಮೆಣಸು ಕೃಷಿಯಲ್ಲಿ ತೊಡಗಿರುವ ರೈತರ ಹಸಿರು ಮೇಣಸಿನ ಗಿಡಗಳು ಸಂಪೂರ್ಣ ಹಾನಿಯಾಗಿರುವ ಬಗ್ಗೆ ದೂರಿದ್ದಾರೆ.