ಡ್ರಗ್ಸ್ ದಂಧೆ ಪ್ರಕರಣ: ಬಿಗ್ ಬಾಸ್ ಸ್ಪರ್ಧಿ ಆಡಂ ಪಾಷಾ ಸೇರಿ 10 ಮಂದಿ ವಿರುದ್ಧ ಚಾರ್ಜ್ಶೀಟ್
ಬೆಂಗಳೂರು, ಫೆ.24: ಅಕ್ರಮ ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಎನ್ಸಿಬಿ ಅಧಿಕಾರಿಗಳು, ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಆಡಂ ಪಾಷಾ ಸೇರಿ 10 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿ ತನಿಖೆ ಚುರುಕುಗೊಳಿಸಿದ್ದ ಅಧಿಕಾರಿಗಳು ಆಡಂ ಪಾಷಾ, ಸುಹಾಸ್ ಗೌಡ, ದೀಕ್ಷಿತ್ ಬೋಪಣ್ಣ, ಜಯೇಶ್ ಚಂದ್ರೆ, ಗರ್ಲಡ್ ಪ್ರವೀಣ್ ಕುಮಾರ್, ಕೆ ಜೆಮ್ರಿಸ್ನನ್ನು ಬಂಧಿಸಿದ್ದರು. ಈಗ ಅವರೆಲ್ಲರ ವಿರುದ್ಧ ನಗರದ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಅಪಾರ್ಟಮೆಂಟ್ನ ಫ್ಲ್ಯಾಟ್ ಮೇಲೆ ಕಳೆದ ಆಗಸ್ಟ್21 ರಂದು ದಾಳಿ ನಡೆಸಿದ್ದ ಎನ್ಸಿಬಿ ಅಧಿಕಾರಿಗಳು, 145 ಡ್ರಗ್ಸ್ ಮಾತ್ರೆ ಹಾಗೂ 2.20 ಲಕ್ಷ ರೂ ನಗದು ಜಪ್ತಿ ಮಾಡಿದ್ದರು.
Next Story