ರಾಜ್ಯದಲ್ಲಿ 571 ಹೊಸ ಕೊರೋನ ಪ್ರಕರಣ ದೃಢ, 4 ಜನರ ಸಾವು
ಬೆಂಗಳೂರು, ಮಾ.4: ರಾಜ್ಯದಲ್ಲಿ ಗುರುವಾರದಂದು 571 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 4 ಜನರು ಸೋಂಕಿಗೆ ಬಲಿಯಾಗಿದ್ದು, 496 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 953136ಕ್ಕೆ ತಲುಪಿದ್ದು, 115 ಜನ ಸೋಂಕಿತರು ಐಸಿಯುನಲ್ಲಿದ್ದಾರೆ.
ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 12350ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 6128ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
ನಾಲ್ವರು ಸೋಂಕಿತರು ಬಲಿ: ಬೆಂಗಳೂರು ನಗರ 2, ಧಾರವಾಡ 1, ಮೈಸೂರು ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 571 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 8, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 385, ಬೀದರ್ 8, ಚಾಮರಾಜನಗರ 2, ಚಿಕ್ಕಬಳ್ಳಾಪುರ 10, ಚಿತ್ರದುರ್ಗ 6, ದಕ್ಷಿಣ ಕನ್ನಡ 19, ದಾವಣಗೆರೆ 4, ಧಾರವಾಡ 5, ಹಾಸನ 11, ಕಲಬುರಗಿ 23, ಕೊಡಗು 5, ಕೋಲಾರ 3, ಕೊಪ್ಪಳ 1, ಮಂಡ್ಯ 2, ಮೈಸೂರು 20, ರಾಯಚೂರು 3, ರಾಮನಗರ 2, ಶಿವಮೊಗ್ಗ 6, ತುಮಕೂರು 11, ಉಡುಪಿ 7, ಉತ್ತರ ಕನ್ನಡ 5, ವಿಜಯಪುರ ಜಿಲ್ಲೆಯಲ್ಲಿ 13 ಪ್ರಕರಣ ಪತ್ತೆಯಾಗಿವೆ.