ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗ ಮೂಲದ ವ್ಯಕ್ತಿ
ಶಿವಮೊಗ್ಗ, ಫೆ.5: ದುಬೈನಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ಲಕ್ಕಿ ಡ್ರಾ ಲಾಟರಿಯಲ್ಲಿ ಸುಮಾರು 24 ಕೋಟಿ ರೂ.ಗಳನ್ನು ಗೆದ್ದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿವಮೂರ್ತಿ ಕೃಷ್ಣಪ್ಪ ಲಕ್ಕಿ ಡ್ರಾ ವಿಜೇತ. ಶಿವಮೂರ್ತಿ ಕೃಷ್ಣಪ್ಪ ಮೆಕ್ಯಾನಿಕ್ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ.
ಇವರ 202511 ನಂಬರಿನ ಲಾಟರಿ ಟಿಕೆಟ್ಗೆ ಈ ಬಹುಮಾನ ಸಿಕ್ಕಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಮನೆಯಲ್ಲಿ ಕುಳಿತು ಲಕ್ಕಿ ಡ್ರಾ ಫಲಿತಾಂಶವನ್ನು ಟಿವಿಯಲ್ಲಿ ವಿಕ್ಷಣೆ ಮಾಡುತ್ತಿದ್ದ ಶಿವಮೂರ್ತಿ ಅವರಿಗೆ ಇವರ ನಂಬರ್ ಆಯ್ಕೆಯಾದಾಗ ನಂಬಲು ಸಾಧ್ಯವಾಗಿಲ್ಲಂತೆ. ಬಹುಮಾನದ ಹಣದಲ್ಲಿ ಹುಟ್ಟೂರು ಶಿವಮೊಗ್ಗದಲ್ಲಿ ದೊಡ್ಡ ಮನೆ ನಿರ್ಮಿಸಿ, ಮಕ್ಕಳ ಭವಿಷ್ಯಕ್ಕೆ ಠೇವಣಿ ಇಡಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಅವರಿಗೆ 10 ಹಾಗೂ 4 ವರ್ಷದ ಇಬ್ಬರು ಮಕ್ಕಳಿದ್ದಾರೆ.
Next Story