ವಿಜಯಪುರ ಮೂಲದ ಯೋಧ ದಿಲ್ಲಿಯಲ್ಲಿ ಆತ್ಮಹತ್ಯೆ
ಹೊಸದಿಲ್ಲಿ, ಮಾ.7: ಕರ್ತವ್ಯ ನಿರತ ವಿಜಯಪುರ ಜಿಲ್ಲೆಯ ಯೋಧ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರಿನ ನಿವಾಸಿ ಯೋಧ ಪರಸಪ್ಪ ಚಿಲಕನಹಳ್ಳಿ(25) ದಿಲ್ಲಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮದ್ರಾಸ್ ರೆಜಿಮೆಂಟ್ನ 27ನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪರಸಪ್ಪ ಚಿಲಕನಹಳ್ಳಿ ತನ್ನ ಪತ್ನಿ ಜತೆ ಹೊಸದಿಲ್ಲಿ ವಾಸವಾಗಿದ್ದರು. ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
Next Story